fbpx
ಸಮಾಚಾರ

ಪ್ರಭಾವಶಾಲೀ ರೇಪಿಷ್ಟ್ ಗಳಿಗೆ ಎನ್ ಕೌಂಟರ್ ರತ್ನಗಂಬಳಿಯಾಗುವುದೇ? ಉಪ್ಪಿ ಪೋಸ್ಟ್ ವಿರುದ್ಧ ನೆಟ್ಟಿಗರು ಗರಂ.

ಪಶುವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಅತ್ಯಾಚಾರಿಗಳನ್ನು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನ ತಂಡ ಎನ್ ಕೌಂಟರ್ ಮಾಡಿದ್ದು ದೇಶಾದ್ಯಂತ ಪೋಲೀಸ್ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಸ್ಯಾಂಡಲ್ ವುಡ್ ರಿಯಲ್ ಸ್ಟಾರ್, ಪ್ರಜಾಕೀಯ ನಾಯಕನಾಗಿರುವ ಉಪೇಂದ್ರ ಮಾತ್ರ ತಮ್ಮದೇ ರೀತಿಯ ಹೇಳಿಕೆ ನೀಡುವುದರೊಡನೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ..

 

 

ಈ ನಾಲ್ವರು ಹುಡುಗರೇ ಆಕೆಯನ್ನು ರೇಪ್ ಮಾಡಿ ಸುಟ್ಟು ಹಾಕಿದ್ದಾರೋ ಇಲ್ಲವೇ ಇದರ ಹಿಂದೆ ಯಾರೋ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೋ? ಈ ರೀತಿಯ ಎನ್‍ಕೌಂಟರ್ ಪ್ರಮುಖ ವ್ಯಕ್ತಿಗಳ ಕೇಸ್‍ನಲ್ಲಿ ಯಾಕಾಗುವುದಿಲ್ಲ? ಕೋರ್ಟ್‍ನಲ್ಲಿ ವಿಚಾರಣೆಗೂ ಮುನ್ನ ನಡೆದ ಈ ಎನ್‍ಕೌಂಟರ್ ಇನ್ನು ಮುಂದೆ ಪ್ರಭಾವಶಾಲಿ ಭ್ರಷ್ಟ ರೇಪಿಸ್ಟ್‍ಗಳಿಗೆ ರತ್ನಗಂಬಳಿಯಾಗುವುದೇ ಎಂದು ಉಪೇಂದ್ರ ಪೋಸ್ಟ್ ಮಾಡಿದ್ದಾರೆ.

 

 

ಬಹಳಷ್ಟು ಜನರು ಈ ಪೋಸ್ಟ್‌ನಿಂದ ಗರಂ ಆಗಿದ್ದಾರೆ. ಇಷ್ಟು ದಿನ ಉಪೇಂದ್ರ ಅವರು ರೋಲ್ ಮಾಡೆಲ್ ಆಗಿದ್ದರು, ಆದರೆ ಅವರ ಈ ಯೋಚನೆ ನೋಡಿದ್ಮೇಲೆ ಬೇಸರ ಆಗುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗಿದೆ, ಅದಕ್ಕೆ ಖುಷಿಪಡೋದನ್ನುಬಿಟ್ಟು ಅದರಲ್ಲಿ ತಪ್ಪು ಹುಡುಕುತ್ತಿದ್ದಾರೆ ಎಂದು ಇನ್ನೂ ಕೆಲವರು ಗರಂ ಆಗಿದ್ದಾರೆ. ಉಪೇಂದ್ರ ಅವರ ಸಿನಿಮಾಗಳನ್ನು ಉದಾಹರಣೆ ಕೊಟ್ಟು ಹಿಗ್ಗಾಮುಗ್ಗಾ ಉಪೇಂದ್ರ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇದಕ್ಕೆ ಉಪೇಂದ್ರ ಅವರ ಬೆಂಬಲಿಗರು ಪ್ರತ್ಯುತ್ತರಿಸಿದ್ದು, ಉಪೇಂದ್ರ ಅವರ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಪ್ರಭಾವಿಗಳು ಭಾಗಿಯಾಗಿರುವ ಪ್ರಕರಣಗಳಲ್ಲೂ ಈ ರೀತಿಯ ಎನ್‍ಕೌಂಟರ್ ಸಾಧ್ಯವೇ? ಎಂದು ತಿರುಗೇಟು ನೀಡಿದ್ದು, ಉಪೇಂದ್ರ ಅವರ ಮಾತುಗಳಿಗೆ ಬಲವಾದ ಸಮರ್ಥನೆಯನ್ನು ನೀಡಿದ್ದಾರೆ.

ಒಟ್ಟಾರೆಯಾಗಿ ಉಪೇಂದ್ರ ಅವರ ಈ ಒಂದು ಯೋಚನೆ ಬಹಳ ಚರ್ಚೆಯಾಗುತ್ತಿರುವುದು ಸತ್ಯ. ಉಪೇಂದ್ರ ಅಂದರೆ ಯಾವಾಗಲೂ ವಿಭಿನ್ನ. ಸಿನಿಮಾಗಳಲ್ಲಿ ಬಿಜಿಯಿದ್ದರೂ ಕೂಡ ಅವರು ‘ಪ್ರಜಾಕೀಯ’ವನ್ನು ಮರೆತಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top