fbpx
ಸಮಾಚಾರ

ನಿಧನರಾದ ಅಭಿಮಾನಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಅಲ್ಲು ಅರ್ಜುನ್!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಂಘದ ಅಧ್ಯಕ್ಷರಾಗಿದ್ದ ಚಿರು ಅವರ ಹಿರಿಯ ಅಭಿಮಾನಿ ನೂರ್ ಮೊಹಮ್ಮದ್ ಹೃದಯಾಘಾತದಿಂದ ಮೊನ್ನೆ (ಡಿಸೆಂಬರ್ 8) ನಿಧನ ಹೊಂದಿದ್ದರು. ಹಲವು ವರ್ಷಗಳಿಂದ ಚಿರು ಕುಟುಂಬಕ್ಕೆ ಆಪ್ತರಾಗಿದ್ದ ನೂರ್ (54 ವರ್ಷ) ಮೆಗಾಸ್ಟಾರ್ ಕುಟುಂಬದಲ್ಲಿ ಒಬ್ಬರಾಗಿಯೇ ಗುರುತಿಸಿಕೊಂಡಿದ್ದರು.

ಹೈದರಾಬಾದ್ ವಲಯದ ಅಧ್ಯಕ್ಷರಾಗಿದ್ದ ನೂರ್ ಭಾಯ್ ಸಾವಿನ ಸುದ್ದಿ ಕೇಳಿ ಆತಂಕಕ್ಕೆ ಒಳಗಾದ ಅಲ್ಲು ಅರ್ಜುನ್ ಅವರು ಸಂತಾಪ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ನೂರ್ ಅವರ ಸ್ವಗೃಹಕ್ಕೆ ಭೇಟಿದ ಅಲ್ಲು ಅರ್ಜುನ್ ಅಂತ್ಯಕ್ರಿಯೆಯಲ್ಲಿ ಕೂಡ ಭಾಗಿಯಾಗಿದ್ದರು. ಈ ವೇಳೆ ಅಲ್ಲು ಅರ್ಜುನ್ ಕಣ್ಣೀರಿಟ್ಟಿದ್ದರು. ಬಳಿಕ ಅಲ್ಲು ಅರ್ಜುನ್, ನೂರ್ ಅಹಮ್ಮದ್ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ನಿರ್ಧರಿಸಿದ್ದಾರೆ.

ಅಲ್ಲು ಅರ್ಜುನ್ ಅಲ್ಲದೆ ಚಿರಂಜೀವಿ ಮತ್ತು ರಾಮಚರಣ್ ಅವರು ಕೂಡ ತಮ್ಮ ಹಿರಿಯ ಅಭಿಮಾನಿ ಮನೆಗೆ ಭೇಟಿ ನೀಡಿದ್ದರು. ಚಿರಂಜೀವಿ ನೂರ್ ಅಹಮ್ಮದ್ ಮನೆಗೆ ಹೋಗಿ ಅವರ ಪತ್ನಿ ಹಾಗೂ ಮಕ್ಕಳಿಗೆ ಸಮಾಧಾನ ಮಾಡಿ ಧೈರ್ಯ ತುಂಬಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top