fbpx
ಸಮಾಚಾರ

ಮುಸ್ಲಿಮರಿಗೆ ಭೂಮಿ ನೀಡಬೇಕಾಗಿಲ್ಲ: ಹಿಂದೂ ಮಹಾಸಭಾದಿಂದ ಮರು ಪರಿಶೀಲನಾ ಅರ್ಜಿ

ಅಯೋಧ್ಯೆ ತೀರ್ಪು ಪ್ರಶ್ನಿಸಿ ಜಮಿಯತ್-ಉಲಮಾ-ಎ ಹಿಂದ್ ಸೇರಿದಂತೆ ಐದು ಜನರ ನಂತರ ಇದೀಗ ಹಿಂದೂ ಮಹಾಸಭಾ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ. ಹಿಂದೂಗಳ ಪರವಾಗಿ ಸಲ್ಲಿಸಿದ ಮೊದಲ ಮರುಪರಿಶೀಲನಾ ಅರ್ಜಿ ಇದಾಗಿದ್ದು, ಮುಸ್ಲಿಮರಿಗೆ ಮಸೀದಿ ನಿರ್ಮಾಣ ಮಾಡಲು ಪ್ರತ್ಯೇಕ ಸ್ಥಳದಲ್ಲಿ 5 ಎಕರೆ ಜಾಗವನ್ನು ಕೊಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದೀಗ ಇದನ್ನು ವಿರೋಧಿಸಿ ಹಿಂದೂ ಮಹಾಸಭಾ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ, ನಿರ್ಮೋಹಿ ಅಖಾಡದ ಅರ್ಜಿ ವಜಾ ಮಾಡಿ, ರಾಮಲಲ್ಲಾ ಅನ್ನೇ ಮುಖ್ಯ ಅರ್ಜಿದಾರ ಎಂದು ಮಾನ್ಯ ಮಾಡಿತ್ತು. ವಿವಾದಿತ ಜಾಗ ರಾಮಲಲ್ಲಾಗೆ ಸೇರಿದ್ದು. ಅಲ್ಲಿ ರಾಮಮಂದಿರ ನಿರ್ಮಿಸಬೇಕು. ಮಂದಿರದ ಹೊಣೆಯನ್ನು ಟ್ರಸ್ಟ್‌ಗೆ ನೀಡಬೇಕು ಎಂದಿತ್ತು.

ಟ್ರಸ್ಟ್‌ ರಚಿಸಲು, ರಾಮಮಂದಿರ ನಿರ್ಮಾಣಕ್ಕೆ ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರಕ್ಕೆ 3–4 ತಿಂಗಳ ಗಡುವು ವಿಧಿಸಿತ್ತು. ಸುನ್ನಿ ವಕ್ಫ್‌ ಬೋರ್ಡ್‌ಗೆ ಮಸೀದಿ ನಿರ್ಮಾಣಕ್ಕೆ ಬೇರೆಡೆ ಪ್ರತ್ಯೇಕ 5 ಎಕರೆ ಭೂಮಿ ನೀಡಬೇಕು ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿತ್ತು. ಈಗ ಮಸೀದಿ ನಿರ್ಮಾಣಕ್ಕೆ ಬೇರೆಡೆ ಪ್ರತ್ಯೇಕ 5 ಎಕರೆ ಭೂಮಿ ನೀಡಬೇಕು ಎನ್ನುವ ತೀರ್ಪಿನ ಕುರಿತು ಮಹಾಸಭಾ ಪ್ರಶ್ನೆ ಎತ್ತಿದೆ.

ತೀರ್ಪಿನಲ್ಲಿ ಉಲ್ಲೇಖವಾಗಿರುವಂತೆ ವಿವಾದಿತ ಜಮೀನಿನ ಆಸುಪಾಸು ಹಿಂದೂಗಳಿಗೆ ಸೇರಿದ್ದು ಎಂದಿರುವಾಗ ಮುಸ್ಲಿಂ ಸಮುದಾಯಕ್ಕೆ ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಐದು ಎಕರೆ ಜಮೀನು ನೀಡ ಬೇಕಾದ ಅಗತ್ಯವಿಲ್ಲ ಎಂದು ಹಿಂದೂ ಮಹಾಸಭಾದ ನ್ಯಾಯವಾದಿ ವಿಷ್ಣು ಶಂಕರ್‌ ಹೇಳಿದ್ದಾರೆ. ಈ ಅರ್ಜಿಯಿಂದಾಗಿ ನ.9ರ ತೀರ್ಪು ವಿರುದ್ಧ ಒಟ್ಟು 7 ಅರ್ಜಿಗಳು ಸಲ್ಲಿಕೆಯಾ ದಂತಾಗಿವೆ. ಈಗಾಗಲೇ ಮುಸ್ಲಿಂ ಸಮುದಾಯದಿಂದ 6 ಅರ್ಜಿಗಳು ಸಲ್ಲಿಕೆಯಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top