fbpx
ಸಮಾಚಾರ

ಕರ್ನಾಟಕ ಆರೋಗ್ಯ ಇಲಾಖೆ ನೇಮಕಾತಿ: 552 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಪೂರೈಕೆದಾರ ಶುಶ್ರೂಷಕಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಇಂದೇ(10-12-2019 ) ಕೊನೆ ದಿನಾಂಕವಾಗಿದೆ. ಒಟ್ಟು 552 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಬೀದರ್, ಬಳ್ಳಾರಿ, ಮೈಸೂರು, ಕೊಪ್ಪಳ, ಯಾದಗಿರಿ, ಕಲಬುರಗಿ, ರಾಯಚೂರು, ಬಾಗಲಕೋಟೆ, ಕೋಲಾರ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ನರ್ಸಿಂಗ್/ಪೋಸ್ಟ್ ಬಿಎಸ್‌ಸಿ ನರ್ಸಿಂಗ್ ಜೊತೆಗೆ ರಾಜ್ಯ ನರ್ಸಿಂಗ್ ಕೆಎನ್‌ಸಿ/ಐಎನ್‌ಸಿ ನೋಂದಣಿ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.

ಒಟ್ಟು ಹುದ್ದೆಗಳ ಸಂಖ್ಯೆ: 552

ವಿದ್ಯಾರ್ಹತೆ:
ಮ್ಯಾನತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್‌.ಸಿ ನರ್ಸಿಂಗ್‌, ಪೋಸ್ಟ್‌ ಬಿಎಸ್‌.ಸಿ ನರ್ಸಿಂಗ್ ಪದವಿ ಪೂರೈಸಿರಬೇಕು. ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಕೊಂಡಿರಬೇಕು.

ವೇತನ:
ಮಾಸಿಕ ₹ 24,200 (ಕೋಲಾರ ಮತ್ತು ಮೈಸೂರು ಜಿಲ್ಲೆಗಳಲ್ಲಿ ₹22,000) ಹೆಚ್ಚುವರಿಯಾಗಿ ₹8,000 ಸೇವಾ ಪ್ರೋತ್ಸಾಹ ಭತ್ಯೆ ಕೂಡ ನೀಡಲಾಗುತ್ತದೆ.

ವಯಸ್ಸು:
ಕನಿಷ್ಠ–18, ಗರಿಷ್ಠ –35 ವರ್ಷ (ಮೀಸಲಾತಿ ಅನ್ವಯ ಸಡಿಲಿಕೆ ಇರುತ್ತದೆ).

ವಯೋಮಿತಿ:
ಈ ಹುದ್ದೆಗಳಿಗೆ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಮಗವಿಕಲರಿಗೆ 10 ವರ್ಷಗಳು.

ನೇಮಕಾತಿ ಪ್ರಕ್ರಿಯೆ:
ಕಂಪ್ಯೂಟರ್‌ ಆಧಾರಿತ ಆನ್‌ಲೈನ್ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಪರೀಕ್ಷೆಯಲ್ಲಿ ಮೆರಿಟ್‌ ಪಡೆದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಕರೆಯಲಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top