fbpx
ಸಮಾಚಾರ

2ನೇ ಮಗುವಿಗೆ ತಂದೆಯಾದ ಕೆಜಿಎಫ್‌ ‘ಗರುಡ’ ಖ್ಯಾತಿಯ ನಟ!

ಕೆಜಿಎಫ್ ಸಿನಿಮಾದಲ್ಲಿ ಕೆಂಗಣ್ಣಿನ ನೋಟದಲ್ಲಿ ಪ್ರೇಕ್ಷಕರ ಗಮನ ಸೆಳೆದಿರುವ ಗರುಡ ಖ್ಯಾತಿಯ ನಟ ರಾಮಚಂದ್ರ ರಾಜು ತಮ್ಮ ಕುಟುಂಬಕ್ಕೆ ಲಿಟಲ್ ಏಂಜಲ್‌ ಅನ್ನು ಸ್ವಾಗತಿಗಿಸಿದ್ದಾರೆ. ಕೆಜಿಎಫ್ ವಿಲನ್ ಗರುಡ ಕುಟುಂಬಕ್ಕೆ 21ರಂದು ಮುದ್ದು ಮಗಳು ಬಂದಿದ್ದಾಳೆ. ಅದನ್ನು ಡಿಸೆಂಬರ್‌ 1 ರಂದು ರಿವೀಲ್ ಮಾಡಿದ್ದಾರೆ.

ಕಳೆದ ನವೆಂಬರ್ 21ರಂದು ಗರುಡ ಅವರ ಪತ್ನಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಗರುಡ ಈ ಸಂಬಂಧ ಡಿಸೆಂಬರ್ 1ರಂದು ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.

‘ವಿತ್‌ ಯೂ ಇನ್‌ ಅವರ್‌ ಲೈಫ್. ನಮ್ಮ ಕುಟುಂಬ ಈಗ ತುಂಬು ಕುಟುಂಬ. ನವೆಂಬರ್‌ 21 ರಂದು ಹೆಣ್ಣು ಮಗಳನ್ನು ಬರಮಾಡಿಕೊಂಡಿದ್ದೇವೆ’ ಎಂದು ಫೋಟೋ ಮೂಲಕ ರಿವೀಲ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಈ ಸಾಲುಗಳೊಡನೆ ಗರ್ಭಿಣಿ ಪತ್ನಿ ಹಾಗೂ ಓರ್ವ ಪುತ್ರನ ಜತೆಗಿರುವ ತಮ್ಮ ಚಿತ್ರವೊಂದನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಗರುಡ ಅವರಿಗೆ ಈಗಾಗಲೇ ಅವರಿಗೆ ಒಬ್ಬ ಗಂಡು ಮಗನಿದ್ದು ಅವನೊಂದಿಗೆ ಪ್ರೆಗ್ನೆನ್ಸಿ ಫೋಟೋ ಶೂಟ್‌ ಮಾಡಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top