fbpx
ಸಮಾಚಾರ

ಕೊನೆಗೂ ಇಳಿಕೆ ಕಂಡ ಈರುಳ್ಳಿ ಬೆಲೆ; ದುಬಾರಿ ಹಣ ಕೊಟ್ಟು ತಂದ ವ್ಯಾಪಾರಿಗಳಿಗೆ ಶಾಕ್

ಒಂದು ಕೆ.ಜಿ.ಗೆ 200 ರೂ. ಗಡಿ ತಲುಪಿದ್ದ ಈರುಳ್ಳಿ ಬೆಲೆ ಇದೀಗ ಗಣನೀಯವಾಗಿ ಇಳಿಕೆಯಾಗಿದೆ. ಮಹಾರಾಷ್ಟ್ರದ ಪೂನಾ ಹಾಗೂ ರಾಜ್ಯದ ಗುಲ್ಬರ್ಗ, ಚಿತ್ರದುರ್ಗದ ಕೆಲವು ಭಾಗಗಳಿಂದ ಸೋಮವಾರ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಆಗಮಿಸಿದ್ದರಿಂದ ಈರುಳ್ಳಿ ಬೆಲೆಯಲ್ಲಿ ಕೆಜಿಗೆ 30 ರಿಂದ 40 ರೂ.ವರೆಗೆ ಇಳಿಕೆಯಾಗಿದೆ.

ಯಶವಂತಪುರ ಎಪಿಎಂಸಿಯಲ್ಲಿ ಶನಿವಾರ ಈರುಳ್ಳಿ ಕೆ.ಜಿ.ಗೆ 150-200 ರೂ. ಇತ್ತು. ಸೋಮವಾರ 120 ರೂ.ಗೆ ಇಳಿಯಿತು. 120 ರೂ. ಇದ್ದ ಹೊಸ ಈರುಳ್ಳಿ 70-80 ರೂ.ಗೆ ಕುಸಿದಿದೆ. ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 200 ರೂ. ತಲುಪಿದ್ದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿಈರುಳ್ಳಿ ಬೇಡಿಕೆ ಪ್ರಮಾಣದಲ್ಲಿಕುಸಿತ ಉಂಟಾಗಿದೆ. ಜತೆಗೆ ವಿದೇಶಿ ಈರುಳ್ಳಿ (ಈಜಿಪ್ಟ್‌) ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಈರುಳ್ಳಿ ಬೆಲೆ ಸ್ವಲ್ಪ ಕಡಿಮೆಯಾಗಿದೆ.

ಏಕಾಏಕಿ ಎಪಿಎಂಸಿಯಲ್ಲಿ ಈರುಳ್ಳಿ ಪೂರೈಕೆ ಅಧಿಕವಾಗಿದ್ದರಿಂದ ಬೇಡಿಕೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಈರುಳ್ಳಿಗೆ ಬೆಲೆ ಚೆನ್ನಾಗಿದೆ ಎಂದು ಸಾವಿರಾರುಗಟ್ಟಲೆ ಹಣ ಕೊಟ್ಟು ಖರೀದಿಸಿ ತಂದ ರೈತರ ಕಣ್ಣಲ್ಲಿ ನೀರು ಸುರಿಯುತ್ತಿದೆ. ಲಾಭ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿ ಖರೀದಿಸಿ ಮಾರಾಟ ಮಾಡಲು ತಂದ ಈರುಳ್ಳಿಯಿಂದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top