fbpx
ಸಮಾಚಾರ

“ಜನಾದೇಶ ಕದ್ದಿದ್ದ ಕಾಂಗ್ರೆಸ್‌ಗೆ ಶಾಸ್ತಿಯಾಗಿದೆ” ಉಪಚುನಾವಣೆ ಗೆಲುವಿಗೆ ಮೋದಿ ಹರ್ಷ!

ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, 12 ಕ್ಷೇತ್ರಗಳು ಕಮಲದ ಪಾಲಾಗಿದೆ. ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಜಯದ ಕುರಿತು ಜಾರ್ಖಂಡ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಒಂದೂವರೆ ವರ್ಷದ ಆಡಳಿತ ನೋಡಿದ್ದರು. ಹಾಗಾಗಿ ಇಂದು ಜನತೆ ಕಮಲದ ಗುರುತಿಗೆ ಮತ ನೀಡುವ ಮೂಲಕ ಉತ್ತರ ನೀಡಿದ್ದಾರೆ ಎಂದರು.

 

 

ಕರ್ನಾಟಕದಲ್ಲಿ ಜನರ ತೀರ್ಪಿಗೆ ಮೋಸ ಮಾಡಿದವರಿಗೆ ಮತದಾರರು ಪ್ರಜಾಪ್ರಭುತ್ವ ಮಾದರಿಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇರಬೇಕೆ, ಬೇಡವೇ ಎಂದು ಇಂದು ನಿರ್ಧಾರವಾಗಬೇಕಾಗಿತ್ತು. ಅದಕ್ಕೆ ಇಂದಿನ ಫಲಿತಾಂಶದಲ್ಲಿ ಉತ್ತರ ಸಿಕ್ಕಿದೆ. ಜನರಿಗೆ ಸ್ಥಿರ ಸರ್ಕಾರ ಬೇಕು, ಆ ಸ್ಥಿರ ಸರ್ಕಾರ ನೀಡುವ ಪಕ್ಷವಾಗಿ ಬಿಜೆಪಿ ಮೇಲೆ ಮತದಾರರು ನಂಬಿಕೆ ಇಟ್ಟಿದ್ದಾರೆ ಎಂದು ಗೊತ್ತಾಗಿದೆ ಎಂದರು.

ಕರ್ನಾಟಕ ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಶಿಕ್ಷೆ ಕೊಟ್ಟಿದ್ದಾರೆ. ಇಂದಿನ ಉಪ ಚುನಾವಣೆ ಫಲಿತಾಂಶ ದೇಶದ ಎಲ್ಲಾ ರಾಜ್ಯಗಳಿಗೂ ಒಂದು ಸಂದೇಶ ನೀಡಿದೆ. ಮತದಾರರ ತೀರ್ಪಿಗೆ ವಿರುದ್ಧವಾಗಿ ಹೋಗಿ ಮತದಾರರನ್ನು ಅವಮಾನಿಸಿದವರಿಗೆ ಮತದಾರರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂಬುದಕ್ಕೆ ಇದುವೇ ನಿದರ್ಶನ ಎಂದು ವಿರೋಧ ಪಕ್ಷಗಳಿಗೆ ಪಿಎಂ ಮೋದಿ ತಿರುಗೇಟು ಕೊಟ್ಟರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top