fbpx
ಸಮಾಚಾರ

ಅರ್ಜುನ್ ಜನ್ಯ ವಿರುದ್ಧ ದರ್ಶನ್ ಅಭಿಮಾನಿಗಳು ಸಿಟ್ಟು!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೇಲೆ ಮುನಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು ‘ಒಡೆಯ’ ಸಿನಿಮಾದ ಹಾಡುಗಳು. ‘ಒಡೆಯ’ ಸಿನಿಮಾದ ನಾಲ್ಕು ಹಾಡುಗಳು ಬಿಡುಗಡೆಯಾಗಿದ್ದು ನಾಲ್ಕೂ ಹಾಡುಗಳೂ ನಿರೀಕ್ಷೆಯ ಮಟ್ಟಕ್ಕೆ ತಲುಪಿಲ್ಲ. ಯೂ ಟ್ಯೂಬ್ ನಲ್ಲಿ ಕೂಡ ಹಾಡುಗಳು ವೀಕ್ಷಣೆಗಳನ್ನು ಪಡೆದುಕೊಳ್ಳಲು ಒದ್ದಾಡುತ್ತಿವೆ. ಇದು ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಒಡೆಯ ಸಿನಿಮಾದ ನಾಲ್ಕು ಹಡಗಳು ದಚ್ಚು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಅಲ್ಲದೆ ಹಾಡುಗಳು ಯೂ ಟ್ಯೂಬ್ ನಲ್ಲಿ ಸಹ ತಕ್ಕ ಮಟ್ಟಿಗೆ ವೀಕ್ಷಣೆ ಪಡೆದುಕೊಂಡಿವೆ. ಇದರಿಂದಾಗಿ ದರ್ಶನ್​ ಅಭಿಮಾನಿಗಳು ಅರ್ಜುನ್​ ಜನ್ಯರ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆ.

ಅರ್ಜುನ್ಯ ಜನ್ಯ ಅವರನ್ನು ‘ರಾಬರ್ಟ್​’ ಸಿನಿಮಾದಿಂದ ತೆಗೆದು ಅವರ ಜಾಗಕ್ಕೆ ಹರಿಕೃಷ್ಣ ಅವರನ್ನು ತರಬೇಕು ಎಂದು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸುತ್ತಿದ್ದಾರೆ. ಡಿ ಬಾಸ್ ಅಭಿಮಾನಿಗಳಲ್ಲಿ ಬಹುತೇಕರು ತಮ್ಮ ಅಸಮಾದಾನ ಹೊರ ಹಾಕಿದ್ದಾರೆ. ಹಾಡುಗಳು ಚೆನ್ನಾಗಿಲ್ಲ. ಅರ್ಜುನ್ ಜನ್ಯ ಉತ್ತಮ ಹಾಡುಗಳನ್ನು ನೀಡಿಲ್ಲ ‘ಒಡೆಯ’ ಹಾಡುಗಳು ದರ್ಶನ್ ಬೆಲೆಯನ್ನು ಕಡಿಮೆ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top