fbpx
ಸಮಾಚಾರ

ಫೇಸ್​ಬುಕ್​ಗೆ ಎಂಟ್ರಿಕೊಟ್ಟ ಕಿಚ್ಚ: ತಮ್ಮ ಖಾತೆಗೆ ವಿಶಿಷ್ಟ ಹೆಸರು ನೀಡಿದ ಸುದೀಪ್

ಕನ್ನಡದ ಬಹುತೇಕ ಸ್ಟಾರ್’ಗಳು ತಮ್ಮತಮ್ಮ ಅಧಿಕೃತ ಫೇಸ್ಬುಕ್ ಖಾತೆ ಈಗಾಗಲೇ ತೆರೆದಿದ್ದಾರೆ. ತಮ್ಮ ವಾಲ್’ಗಳಲ್ಲಿ ತಾವು ನಟಿಸುವ ಸಿನಿಮಾಗಳ ಮಾಹಿತಿಯಿಂದ ಹಿಡಿದು ಇತರೆ ವಿಚಾರಗಳನ್ನೂ ಅನೇಕರು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮಾತ್ರ ಕಳೆದ ಏಳೆಂಟು ವರ್ಷಗಳಿಂದ ಫೇಸ್ಬುಕ್ ಬಿಟ್ಟು ಹೋಗಿದ್ದರು. ಆದರೆ ಇದೀಗ ಮತ್ತೊಮ್ಮೆ ಅಧಿಕೃತವಾಗಿ ಫೇಸ್ಬುಕ್ ಗೆ ಕಿಚ್ಚ ರೀ ಎಂಟ್ರಿ ಕೊಟ್ಟಿದ್ದಾರೆ.

 

 

ಸುದೀಪ್ ಹತ್ತು ಹರ್ಷಗಳ ಹಿಂದೆಯೆ ಸುದೀಪ್ ಟ್ವಿಟ್ಟರ್ ಖಾತೆ ತೆರೆದಿದ್ದರು. ಸದ್ಯ 2.3 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಸಂಪಾದಿಸಿರುವ ಕಿಚ್ಚ ಈಗ ಫೇಸ್ ಬುಕ್ ಗೆ ಎಂಟ್ರಿ ಕೊಟ್ಟಿದ್ದಾರೆ. ಟ್ವಿಟ್ಟರ್ ಜೊತೆಗೆ ಇನ್ಸ್ಟಾಗ್ರಾಮ್ ನಲ್ಲಿಯೂ ಸುದೀಪ್ ಆಕ್ವೀಟ್ ಆಗಿದ್ದಾರೆ. ಆದರೀಗ ದಿಢೀರನೆ ಕಿಚ್ಚ ಫೇಸ್ ಬುಕ್ ಗೆ ಎಂಟ್ರಿಕೊಟ್ಟಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ಅಂದ್ಹಾಗೆ ಸುದೀಪ್ ಫೇಸ್ಬುಕ್ ಖಾತೆ ಹೆಸರು ‘I am K’ ಎಂದು ಇದೆ. ಕೆ ಅಂದರೆ ಎಲ್ಲರಿಗೂ ಗೊತ್ತಿರವ ಹಾಗೆ ಕಿಚ್ಚ ಸುದೀಪ್. ಇನ್ನು ಕವರ್ ಫೋಟೋ ಬಾದ್ ಶಾ ಕಿಚ್ಚ ಸುದೀಪ್ ಎಂದು ಇದೆ. ನಮಸ್ಕರಿಸುತ್ತಿರುವ ಪೋಟೋವನ್ನು ಡಿಪಿ ಹಾಕಿದ್ದಾರೆ. ಇನ್ಮುಂದೆ ಕಿಚ್ಚನನ್ನ ಫೇಸ್‌ಬುಕ್‌ನಲ್ಲಿ ಮಾತಾಡಿಸ್ಬಹುದು ಅನ್ನೋ ಖುಷಿಯಲ್ಲಿ ಅವರ ಫ್ಯಾನ್ಸ್ ಇದ್ದಾರೆ.

ಅಂದಹಾಗೆ ಸುದೀಪ್ ಅವರು ಈ ಹಿಂದೆ ‘kiccha sudeep’ ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು ಸಕ್ರಿಯವಾಗಿದ್ದರು. ಆದರೆ ಆ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿ ದುರುಪಯೋಗಪಡಿಸಿಕೊಂಡಿದ್ದರಿಂದ ಸುದೀಪ್ ಅವರು ಖಾತೆಯನ್ನು ಕ್ಲೋಸ್ ಮಾಡಿ ಫೇಸ್ಬುಕ್ ನಿಂದ ದೂರ ಉಳಿದಿದ್ದರು. ಈಗ ಮತ್ತೊಮ್ಮೆ ಫೇಸ್ಬುಕ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top