fbpx
ಸಮಾಚಾರ

ಅರವಿಂದ ಲಿಂಬಾವಳಿಯದ್ದು ಎನ್ನಲಾದ ಅಶ್ಲೀಲ ವಿಡಿಯೊ ನಕಲಿ: ವಿಧಿ ವಿಜ್ಞಾನ ಪ್ರಯೋಗಾಲಯ

ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿಯದ್ದು ಎನ್ನಲಾದ ಅಶ್ಲೀಲ ವಿಡಿಯೊ ನಕಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕೃತವಾಗಿ ದೃಢೀಕರಿಸಿದೆ. ಈ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಇಲಾಖೆ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ನಕಲಿ ವಿಡಿಯೊ ಎಂದು ವರದಿ ನೀಡಿದೆ. ಸೋಮವಾರ ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಈ ವರದಿಯನ್ನು ಮಾರತ್ ಹಳ್ಳಿ ಉಪವಿಭಾಗದ ಎಸಿಪಿ ಅವರಿಗೆ ತಿಳಿಸಿದ್ದಾರೆ. ವಿಡಿಯೋದಲ್ಲಿ ಸತ್ಯವಿಲ್ಲ ಎಂದು ಹೇಳಿದೆ.

ಶಾಸಕರಿಗೆ ಸಂಬಂಧಿಸಿದ್ದು ಎನ್ನಲಾದ ಹಾಗೂ ವೈರಲ್‌ ಆದ ವಿಡಿಯೋಗಳ ಪ್ರೇಮ್‌ಗಳನ್ನು ಪರಿಶೀಲಿಸಿದಾಗ ಈ ವಿಡಿಯೋ ಅಸಲಿಯಲ್ಲ ಎಂದು ತಿಳಿದು ಬಂದಿದೆ. ಜತೆಗೆ ಈ ವಿಡಿಯೋದಲ್ಲಿರುವ ಅಶ್ಲೀಲತೆ ಬಗ್ಗೆಯೂ ಯಾವುದೇ ಸ್ಪಷ್ಟ ವ್ಯಾಖ್ಯಾನ ಇಲ್ಲದಿರುವುದರಿಂದ ಅದರ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಈ ವಿಡಿಯೋ ಫೈಲ್‌ ಅಸಲಿ ಅಲ್ಲದಿರುವುದರಿಂದ ಅದರಲ್ಲಿರುವ ವ್ಯಕ್ತಿಗಳ ಬಗ್ಗೆಯೂ ಯಾವುದೇ ಮಾಹಿತಿ ನೀಡಲಾಗಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಉಲ್ಲೇಖೀಸಿದೆ.

ವಿಡಿಯೋ ವೈರಲ್‌ ಸಂಬಂಧ ಗಿರೀಶ್‌ ಭಾರದ್ವಾಜ್‌ ಎಂಬವರು ಶಾಸಕ ಅರವಿಂದ ಲಿಂಬಾವಳಿ ಪರವಾಗಿ ಜು. 19ರಂದು ಎಚ್‌ಎಎಲ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ವಿಡಿಯೋ ಸಲ್ಲಿಸಿದ್ದರು. ಈ ವಿಡಿಯೋ ಪರಿಶೀಲಿಸಿದ ಎಫ್ಎಸ್‌ಎಲ್‌ ಅಧಿಕಾರಿಗಳು ಇದೀಗ ವಿಡಿಯೋ ನಕಲಿ ಎಂದು ದೃಢಪಡಿಸಿ ವರದಿ ನೀಡಿದ್ದಾರೆ.

ಮೈತ್ರಿ ಸರ್ಕಾರ ಉರುಳುವ ಮುನ್ನಾ ಕೆಲವು ದಿನಗಳ ಮುಂಚೆಯವರೆಗೂ ಅರವಿಂದ ಲಿಂಬಾವಳಿ ಅವರಿಗೆ ಮಹತ್ವದ ಹುದ್ದೆ ಸಿಗುತ್ತದೆ ಎಂದೇ ಹೇಳಲಾಗಿತ್ತು. ಮೈತ್ರಿ ಸರ್ಕಾರ ಉರುಳುವುದಕ್ಕೆ ಕೆಲವೇ ದಿನಗಳ ಮುಂಚೆ ಬಿಡುಗಡೆಯಾಗಿದ್ದ ಅರವಿಂದ ಲಿಂಬಾವಳಿಯವರದ್ದು ಎನ್ನಲಾದ ಖಾಸಗಿ ವಿಡಿಯೋ ಸಹ ಲಿಂಬಾವಳಿ ಅವರ ಹಿನ್ನಡೆಗೆ ಕಾರಣ ಎನ್ನಲಾಗಿತ್ತು. ಆದರೆ ಈಗ ವಿಡಿಯೋ ನಕಲಿ ಎಂಬುದು ದೃಢಪಟ್ಟಿದೆ. ಹೀಗಾಗಿ ಮತ್ತೊಮ್ಮೆ ಲಿಂಬಾವಳಿ ಅವರನ್ನು ಸಂಪುಟಕ್ಕೆ ಸೇರಿಸಲು ಅವರ ಅಭಿಮಾನಿಗಳು ಕಾದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top