fbpx
ಸಮಾಚಾರ

ಬೆಂಗಳೂರಲ್ಲಿ ಗಗನಕ್ಕೇರಿದ ಪೆಟ್ರೋಲ್‌ ದರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 20 ಪೈಸೆ ಏರಿಕೆಯಾಗಿ 77.52 ರೂ. , ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 23 ಪೈಸೆ ಏರಿಕೆಯಾಗಿ 68.29 ರೂ. ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಈ ಹಿಂದೆ ಕಚ್ಚಾ ತೈಲದ ಬೆಲೆ ಹೆಚ್ಚಳದಿಂದಾಗಿ, ದೇಶದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಕಚ್ಚಾ ತೈಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಿರವಾಗಿದ್ದರೂ, ಬೆಂಟ್ರಾ ಕಚ್ಚಾ ಬೆಲೆ ಸುಮಾರು ಎರಡು ತಿಂಗಳಲ್ಲೇ ಗರಿಷ್ಠ ಮಟ್ಟದಲ್ಲಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ಇನ್ನು ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲಿ ಪೆಟ್ರೊಲ್‌ ದರದಲ್ಲಿ ಏರಿಕೆ ಕಂಡಿದ್ದು, ರಾಜಧಾನಿ ದಿಲ್ಲಿಯಲ್ಲಿ 75 ರೂ.ಗೆ ತಲುಪಿದೆ. ಇನ್ನು ವಾಣಿಜ್ಯ ನಗರಿ ಮುಂಬಯಿನಲ್ಲಿ ಈಗಾಗಲೇ 80 ರೂ. ದಾಟಿದ್ದು ರೂ.80.65 ರೂ.ಗೆ ತಲುಪಿದೆ. ಕೋಲ್ಕತಾದಲ್ಲಿ 13 ಪೈಸೆ ಹೆಚ್ಚಳದೊಂದಿಗೆ 77.67 ರೂ. ತಲುಪಿದ್ದು ಚೆನ್ನೈನಲ್ಲಿ ರೂ.77.97 ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top