fbpx
ಸಮಾಚಾರ

“ಈಗಲೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು, ನಮ್ಮ ಗುರುಗಳು” ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ

ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಶಾಸಕ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ರಮೇಶ್ ಅವರ ಕಾಲೆಳೆದಿದ್ದಾಳೆ.

ಸಿದ್ದು ಮತ್ತು ರಮೇಶ್ ನಡುವಿನ ಸಂಭಾಷಣೆ ಈ ರೀತಿ ಇದೆ:
ಸಿದ್ದರಾಮಯ್ಯ – ಬಾರಪ್ಪ ರಮೇಶ, ಬಾ ಅಂದಾಗ ಬರದೋನು. ಈಗ ಬಂದಿದ್ದಿಯಲ್ಲ. ಬಾ
ಜಾರಕಿಹೊಳಿ – ನಮ್ಮ ನಾಯಕರ ಜೊತೆ ಮಾತಾಡ್ಬೇಕು ಸ್ವಲ್ಪ ಹೊರಗೆ ಹೋಗಿ (ಆಪ್ತರಿಗೆ, ವೈದ್ಯರಿಗೆ)
ಸಿದ್ದರಾಮಯ್ಯ – ಕಂಗ್ರಾಟ್ಸ್ ರಮೇಶ . ಕೊನೆಗೂ ಗೆದ್ದೇ .
ಜಾರಕಿಹೊಳಿ – ನಿಮ್ಮ ಆಶೀರ್ವಾದದಿಂದ ಗೆದ್ದಿದ್ದೇನೆ. ನೀವು ನಮ್ಮ ಗುರುಗಳು, ನಿಮ್ಮ ಆಶೀರ್ವಾದ ಇದ್ರೆ ಮಂತ್ರಿ ಆಗ್ತೇನೆ.

ಸಿದ್ದರಾಮಯ್ಯ – ನಂದಲ್ಲಪ್ಪ ಇವಾಗ ಯಡಿಯೂರಪ್ಪಂದು ಆಶೀರ್ವಾದ ಇದ್ರೆ ಡಿಸಿಎಂ ಆಗ್ತೀಯಾ ಬಿಡು
ಜಾರಕಿಹೊಳಿ – ಎಲ್ಲಿ ಸರ್, ನಮಗೆ ಪಾರ್ಟಿ ಬಿಟ್ಟಿದ್ದಕ್ಕೆ ಬೇಜಾರಿದೆ. ಪಕ್ಷದಲ್ಲಾದ ಕೆಲ ಬೆಳವಣಿಗೆಯಿಂದ ಬಿಡಬೇಕಾಯ್ತು.
ಸಿದ್ದರಾಮಯ್ಯ – ಆಯ್ತು ಆ ಮಾತೇಕೆ ಬಿಡು ಈಗ, ಒಳ್ಳೆಯದಾಗ್ಲಿ ಹೋಗು.. ನಾನು ಚೆನ್ನಾಗಿದ್ದೇನೆ. ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತೇನೆ.
ಜಾರಕಿಹೊಳಿ – ಏನೇ ಇರಲಿ ಸರ್ ಗೆದ್ದ ಖುಷಿಯಂತೂ ನನ್ನಲ್ಲಿಲ್ಲ…

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ಅವರು ನಾಳೆ ಡಿಸ್ಚಾರ್ಜ್ ಆಗುತ್ತಾರೆ ಎಂದರು. ನಾವು ಯಾವುದೇ ಪಕ್ಷಕ್ಕೂ ಹೋಗಿರಬಹುದು, ಆದರೂ ಸಿದ್ದರಾಮಯ್ಯ ಅವರೇ ಎಂದಿಗೂ ತಮ್ಮ ನಾಯಕರೇ. ಉಪಚುನಾವಣೆಯಲ್ಲಿ ಗೆದ್ದಾಗಲೇ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂದು ಘೋಷಿಸಿದ್ದೆ. ಈಗಲೂ ಅದನ್ನೇ ಹೇಳುತ್ತೇವೆ. ಪಕ್ಷ ಬದಲಾವಣೆ ಮಾಡಿದರೂ ಅವರೇ ನಮ್ಮ ಗುರುಗಳು. ಭೇಟಿಯಲ್ಲಿ ಅವರೊಂದಿಗೆ ಏನೇನು ಚರ್ಚಿಸಿದ್ದೇವೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ‌ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top