fbpx
ಸಮಾಚಾರ

ಕಿಚ್ಚನ ‘ಫ್ಯಾಂಟಮ್’ ಚಿತ್ರದಲ್ಲಿ ಮತ್ತೊಬ್ಬ ಸ್ಟಾರ್ ಹೀರೊ ನಟನೆ!!

ಸೆಟ್ಟೇರುವ ಮುನ್ನವೇ ಕಿಚ್ಚ ಸುದೀಪ್ ನಟನೆಯ ಮುಂದಿನ ಸಿನಿಮಾ ಪ್ಯಾಂಟಮ್ ಸಿಕ್ಕಾಪಟ್ಟೆ ಸದ್ದುಮಾಡುತ್ತಿದೆ,. ಹೌದು, ನಿರ್ದೇಶಕ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ‘ಫ್ಯಾಂಟಮ್’ ಸಿನಿಮಾ ಮೇಲೆ ಸೆಟ್ಟೇರುವ ಮುನ್ನವೇ ನಿರೀಕ್ಷೆಗಳು ಮನೆ ಮಾಡುತ್ತಿದೆ. ಕಿಚ್ಚ ಸುದೀಪ್ ಬಿಟ್ಟರೆ ಚಿತ್ರಕ್ಕೆ ಸ್ಟಾರ್ ಕಾಸ್ಟ್ ಇನ್ನೂ ಫೈನಲ್ ಆಗಿರಿಲ್ಲ. ಆದರೀಗ ಚಿತ್ರಕ್ಕೆ ಸ್ಯಾಂಡಲ್ ವುಡ್ ನ ಮತ್ತೊರ್ವ ನಟ ಎಂಟ್ರಿ ಕೊಟ್ಟಿದ್ದಾರೆ! ಆ ನಟ ಯಾರು ಅಂತೀರಾ? ಮುಂದೆ ಓದಿ.

 

 

ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ಮಾತ್ರವಲ್ಲದೆ ರಂಗಿತರಂಗ ಖ್ಯಾತಿಯ ಹಿರೋ ನಿರೂಪ್ ಭಂಡಾರಿ ಅಭಿನಯಿಸಲಿದ್ದಾರೆ. ಮೂರು ಚಿತ್ರಗಳಲ್ಲಿ ಅಭಿನಯಿಸಿರುವ ನಿರೂಪ್ ಭಂಡಾರಿ ಇದೀಗ ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ಜೊತೆಗೆ ಅಭಿನಯಿಸುವುದು ಪಕ್ಕಾ ಆಗಿದೆ.

ಮೊದಲಿಗೆ ಸುದೀಪ್ ಸಂಬಂಧಿ ಸಂಚಿತ್ ಸಂಜೀವ್ ಅವರನ್ನು ಈ ಚಿತ್ರಕ್ಕೆ ಕರೆತರಲು ಚಿತ್ರ ತಂಡ ಯೋಚಿಸಿತ್ತು. ಆದರೆ, ಕೆಲ ಸುತ್ತಿನ ಚರ್ಚೆಯ ಬಳಿಕ ನಿರೂಪ್ ಭಂಡಾರಿ ಅವರನ್ನು ಹಾಕಿಕೊಳ್ಳಲು ನಿರ್ಧರಿಸಲಾಗಿದೆ. ಈ ಮಧ್ಯೆ ಸಂಚಿತ್ ಶೀಘ್ರದಲ್ಲಿಯೇ ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ನಿರೂಪ್ ಭಂಡಾರಿ ಬಿಗ್ ಸ್ಟಾರ್ ಜೊತೆಗೆ ತೆರೆ ಹಂಚಿಕೊಳ್ಳುವುದರ ಜೊತೆಗೆ ಅವರ ಸಹೋದರ ಅನೂಪ್ ಭಂಡಾರಿ ಅವರೊಂದಿಗೆ ಮೂರನೇ ಬಾರಿಗೆ ಒಟ್ಟಾಗಿ ಕೆಲಸ ಮಾಡಲಿದ್ದಾರೆ.

ಇನ್ನು ಫ್ಯಾಂಟಮ್ ಸಿನಿಮಾ ಸದ್ಯ ಚಿತ್ರೀಕರಣಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಇನ್ನೇನು ಶೀಘ್ರದಲ್ಲೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ಸದ್ದಿಲ್ಲದೆ ತಾರಾಗಣದ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದೆ. ಸದ್ಯ ‘ಫ್ಯಾಂಟಮ್ ಚಿತ್ರದ ಸ್ಕ್ರಿಪ್ಟ್ ಕೆಲಸ ಬಹುತೇಕ ಕೊನೆಯ ಹಂತದಲ್ಲಿದೆ. ಇತ್ತ ‘ಕೋಟಿಗೊಬ್ಬ 3’ ಶೂಟಿಂಗ್​ನಲ್ಲಿ ಸುದೀಪ್ ತೊಡಗಿಸಿಕೊಂಡಿದ್ದಾರೆ. ಅದು ಮುಗಿಯುತ್ತಿದ್ದಂತೆ ‘ಫ್ಯಾಂಟಮ್ ಶುರುವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top