fbpx
ಸಮಾಚಾರ

ವೇದಿಕೆಯಲ್ಲೇ ಕಣ್ಣೀರು ಹಾಕಿದ ದೀಪಿಕಾ ಪಡುಕೋಣೆ!

ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್‌ ಬದುಕಿನ ಕಥೆ ಆಧಾರಿತ ‘ಛಪಾಕ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ರಿಲೀಸ್‌ ವೇಳೆ ಗುಳಿಕೆನ್ನೆಯ ಬೆಡಗಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ ಪ್ರಸಂಗ ನಡೀತು.

ದೇಶಾದ್ಯಂತ ಸುದ್ದಿ ಮಾಡಿರುವ ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಲಕ್ಷ್ಮಿ ಅಗರ್ ವಾಲ್ ಜೀವನಾಧಾರಿತ ಕಥೆ ಛಪಾಕ್ ಆಗಿದೆ. ಚಿತ್ರದ ಶೂಟಿಂಗ್, ಎದುರಾದ ಸನ್ನಿವೇಶ ಮತ್ತು ಲಕ್ಷ್ಮಿ ಅಗರ್ವಾಲ್ ಬದುಕಿನಲ್ಲಿ ಎದುರಾದ ಘಟನೆಗಳ ಬಗ್ಗೆ ನೆನೆದು ದೀಪಿಕಾ ಕಣ್ಣೀರು ಹಾಕಿದರು. ದೀಪಿಕಾ ಭಾವುಕರಾಗಿರುವ ಫೋಟೊ ಮತ್ತು ವಿಡಿಯೊ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮದುವೆ ಬಳಿಕ ದೀಪಿಕಾ ನಟಿಸಿರುವ ಮೊದಲ ಚಿತ್ರ ಇದಾಗಿದ್ದು, ಈ ಬಾರಿ ಆ್ಯಸಿಡ್ ದಾಳಿಗೆ ಒಳಗಾದ ಮಾಲತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಷಯಗಳಿಗೆ ಚಿತ್ರ ಸದ್ದು ಮಾಡಿಕೊಂಡು ಬರುತ್ತಿದೆ. ದೀಪಿಕಾ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾದ ದಿನವೇ ಚಿತ್ರ ಭರವಸೆಯನ್ನು ಮೂಡಿಸಿತ್ತು. ಪ್ರತಿ ಸಿನಿಮಾಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ದೀಪಿಕಾ ಮತ್ತೊಮ್ಮೆ ಆ ವಿಷಯದಲ್ಲಿ ಸೈ ಅನ್ನಿಸಿಕೊಂಡಿದ್ದಾರೆ.

ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದವರ ಹೋರಾಟ ನಡೆಸುವ ಮಾಲತಿಗೆ ನ್ಯಾಯ ಸಿಗುತ್ತಾ? ಕತ್ತಲೆಯಲ್ಲಿ ಹೊಂಗಿರಣವಾಗಿ ಬಂದ ಗೆಳೆಯನ ಆಸರೆ ಮಾಲತಿಗೆ ಸಿಗುತ್ತಾ? ಮತ್ತೆ ಮಾಲತಿ ಬದುಕು ಎಲ್ಲರಂತೆ ನಡೆಯುತ್ತಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ ಜನವರಿ 10ರವರೆಗೆ ನೀವು ಕಾಯಬೇಕು. ಚಿತ್ರ ಜನವರಿ 10 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top