fbpx
ಸಮಾಚಾರ

KSRTC 2020 ನೇಮಕಾತಿ: 2814 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಖಾಲಿ ಇರುವ ಚಾಲಕ, ಚಾಲಕ ಕಮ್ ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಚಾಲಕ 55 ಹುದ್ದೆ ಹಾಗೂ 259 ಚಾಲಕ ಕಮ್ ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು,ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 8-01-2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಆಯ್ಕೆಯಾದವರು ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಹುಬ್ಭಳ್ಳಿ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ವಿಭಾಗ ಮತ್ತು ಶಿರಸಿಯಲ್ಲಿ ಕೆಲಸ ಮಾಡಬೇಕಿದೆ. ಡಿಸೆಂಬರ್ 10 ರಿಂದ ಜನವರಿ 8ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಹುದ್ದೆಗಳ ವಿವರ:
ಚಾಲಕ: 2500 ಹುದ್ದೆಗಳು
ಚಾಲಕ (ಪಜಾ-ಹಿಂಬಾಕಿ): 55 ಹುದ್ದೆಗಳು
ಚಾಲಕ-ಕಂ-ನಿರ್ವಾಹಕ (ಪ.ಜಾತಿ-ಹಿಂಬಾಕಿ): 259 ಹುದ್ದೆಗಳು

ಒಟ್ಟು: 2814 ಹುದ್ದೆಗಳು

ವಯೋಮಿತಿ:
ಚಾಲಕ ಮತ್ತು ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಕನಿಷ್ಠ 24 ವರ್ಷಗಳು ತುಂಬಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ. ಪ.ಜಾತಿ, ಪ.ಪಂಗಡ. ಪ್ರವರ್ಗ-1 ಅಭ್ಯರ್ಥಿಗಳಿಗೆ – 40 ವರ್ಷಗಳು, ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ- 38 ವರ್ಷಗಳು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ -35 ವರ್ಷಗಳು

ವೇತನದ ವಿವರ:
ಚಾಲಕ/ಚಾಲಕ-ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 12,400/- ರಿಂದ 19,550/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೂಲ ದಾಖಲಾತಿಗಳ, ದೈಹಿಕ ಅರ್ಹತೆಯ ಪರಿಶೀಲನೆ ಮತ್ತು ಚಾಲನಾ ವೃತ್ತಿ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಹತೆಗಳು :
1.ಚಾಲಕ ಹುದ್ದೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC (10 ನೇ ತರಗತಿ) ಉತ್ತೀರ್ಣರಾಗಿರಬೇಕು. ಹಾಗೂ ಚಾಲ್ತಿ ಇರುವ ಭಾರೀ ಸರಕು ಸಾಗಾಣಿಕೆ ವಾಹನ ಚಾಲನಾ ಪರವಾನಿಗೆ ಜತೆಗೆ ಕರ್ನಾಟಕ PSV ಬ್ಯಾಡ್ಜ್‌ ಹೊಂದಿರಬೇಕು.

2.ಚಾಲಕ ಕಮ್ ನಿರ್ವಾಹಕ: ಅಭ್ಯರ್ಥಿಗಳು SSLC ಅಥವಾ ತತ್ಸಮಾನ ತೇರ್ಗಡೆಯಾಗಿರಬೇಕು. ಮತ್ತು ಹೆವಿ ವೆಹಿಕಲ್ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು. * PSV ಬ್ಯಾಡ್ಜ್‌ ಮತ್ತು ಪಾಸೆಂಜರ್ ವೆಹಿಕಲ್ ಲೈಸನ್ಸ್‌ ಹೊಂದಿರಬೇಕು.

ಈ ಬಗ್ಗೆ ಇನ್ನಷ್ಟು ಮಾಹಿತಿ ಸಂಸ್ಥೆಯ ವೆಬ್‌ಸೈಟ್‌ ವಿಳಾಸ www.nwkrtc.in ಗೆ ಭೇಟಿ ನೀಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top