fbpx
ಸಮಾಚಾರ

ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದ ‘ನಿಜವಾದ ಹುಲಿಯಾ’

ಇತ್ತೀಚೆಗೆ ಕಾಗವಾಡದ ಕಾಂಗ್ರೆಸ್ ಸಮಾವೇಶದಲ್ಲಿ ವೈರಲ್ ಆಗಿದ್ದ ‘ಹೌದು ಹುಲಿಯಾ’ ಡೈಲಾಗ್ ಖ್ಯಾತಿಯ ಪೀರಪ್ಪ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೋಡಲು ಬೆಂಗಳೂರಿಗೆ ಬಂದಿದ್ದರು. ಸಿದ್ದರಾಮಯ್ಯ ಅವರನ್ನು ಭೇಟಿಯಾದ ಪೀರಪ್ಪ ತಮ್ಮ ಮೆಚ್ಚಿನ ನಾಯಕನ ಆರೋಗ್ಯ ವಿಚಾರಿಸಿದ್ದಾರೆ.

 

 

ಉಪಚುನಾವಣೆ ಪ್ರಚಾರದ ವೇಳೆ ಫುಲ್ ವೈರಲ್ ಆದ ಡೈಲಾಗ್ ‘ಹೌದು ಹುಲಿಯಾ’. ಕಾಗವಾಡದಲ್ಲಿ ಕಾಂಗ್ರೆಸ್ ಆಭ್ಯರ್ಥಿ ಪರ ಸಿದ್ದರಾಮಯ್ಯನವರು ಪ್ರಚಾರದ ಭಾಷಣ ಮಾಡುವ ವೇಳೆ ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು ಅಂದಾಗ ವೇದಿಕೆ ಮುಂದೆ ಕುಳಿತಿದ್ದ ಪಕೀರಪ್ಪ ಕಟ್ಟಿಮನಿ ಹೌದು ಹುಲಿಯಾ ಅಂತಾ ಜೋರಾಗಿ ಕೂಗಿ ಹೇಳಿದ್ದರು.

ಕುಡಿದ ಮತ್ತಿನಲ್ಲಿ ಹೌದು ಹುಲಿಯಾ ಎಂದು ಹೇಳಿದ್ದು ಮಾತು ರಾಜ್ಯಾದ್ಯಂತ ಫೇಮಸ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿತ್ತು. ಟಿಕ್ ಟಾಕ್ ಗಳಲ್ಲಿ ಎಲ್ಲಾ ಫುಲ್ ಬಳಕೆ ಮಾಡಿಕೊಂಡು ಡಬ್ ಸ್ಮ್ಯಾಶ್ ಮಾಡಿದ್ರು. ಇದಾದ ಬಳಿಕ ಡೈಲಾಗ್ ಹೇಳಿದ ಪಕೀರಪ್ಪ ಕಟ್ಟಿಮನಿ ಕೂಡ ಫುಲ್ ಫೇಮಸ್ ಆದರು. ಇದರ ಬೆನ್ನಲ್ಲೆ ಇಂದು ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಪೀರಪ್ಪ ಕಟ್ಟೀಮನಿ, “ನಾ ನಿಮ್ನ ನಂಬಕೊಂಡ ಬಂದನ್ರೀ ಅವ್ರದೇನ ನಮಗ ಗೊತ್ತಿಲ್ಲರ್ರೀ. ಅವ್ರ ಮ್ಯಾಗ್ ನಮ್ದ್ ಹಂಬಲ ಇಲ್ಲರ್ರೀ ನಮ್ದ ಕಾಂಗ್ರೆಸ್ ಐತ್ರೀ. ನಮಗ ಸಿದ್ದರಾಮಣ್ಣ ಬೇಕ್ರೀ. ಅವ್ರ ಇಲ್ಲದ ನಮಗ ಗತಿ ಇಲ್ಲ. ಸಿದ್ದರಾಮಣ್ಣ ಆರಾಮ ಇರಬೇಕ್ರೀ. ನಿಮಗ ಆರಾಮ ಇಲ್ಲರ್ರೀ. ಈಗ ದವಾಖಾನಿಗಿ ತೋರಸಕೊಂಡ ಬಂದರ್ರೀ. ಈಗ ಆರಾಮ ಆಗೇತ್ರೀ, ನಾ ಬಾಳ್ ಖುಷಿ ಆಗೇನ್ರೀ. ನನಗ ನೀವ ಬೇಕ್ರೀ.” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಇಡೀ ರಾಜ್ಯಕ್ಕೆ ಪರಿಚಯ ಆಗಿಬಿಟ್ಟೆ ನೀನು ಎಂದರು. ಹೌದೋ ಹುಲಿಯಾ ಭೇಟಿ ಮಾಡಿರುವ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ” ಕಾಗವಾಡದಲ್ಲಿ ನನ್ನ ಭಾಷಣದ ವೇಳೆ “ಹೌದೋ ಹುಲಿಯಾ” ಅಂತ‌ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟೀಮನಿ. ಅಷ್ಟೇ ಪ್ರೀತಿಯಿಂದ ಇಂದು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ಇಂಥ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಈತನೇ ನಿಜವಾದ ‘ಹುಲಿಯಾ” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top