fbpx
ಸಮಾಚಾರ

18 ವರ್ಷಗಳ ನಂತರ ಚಂದನವನಕ್ಕೆ ಮರಳಿದ ಖ್ಯಾತ ನಟ!

ಸುಮಾರು ಹದಿನೆಂಟು ವರ್ಷಗಳ ಹಿಂದೆ “ಗಟ್ಟಿಮೇಳ’ ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಬಂದಿದ್ದ ನಿರ್ದೇಶಕ ಎಸ್‌. ಮಹೇಂದರ್‌ ಆ ನಂತರ ಯಾವುದೇ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಅನೇಕ ವರ್ಷಗಳ ನಂತರ ಮತ್ತೆ ಚಂದನ ವನಕ್ಕೆ ಮರಳಿದ್ದಾರೆ. ‘ಶಬ್ಧ‘ ಹೆಸರಿನ ಹೊಸ ಸಿನಿಮಾದ ಮೂಲಕ ಬಣ್ಣದ ಪರದೆ ಮೇಲೆ ನಟಿಸಲು ಮುಂದಾಗಿದ್ದಾರೆ.

 

 

‘ಪ್ಲಸ್’ ಚಿತ್ರಕ್ಕೆ ನಿರ್ದೇಶನ ಮಾಡಿದ ನಾಲ್ಕು ವರ್ಷಗಳ ನಂತರ ಗಡ್ಡ ವಿಜಿ ಮತ್ತೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಅಂದರೆ ಗಡ್ಡ ವಿಜಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನೂತನ ಸಿನಿಮಾ ‘ಶಬ್ದ’ದಲ್ಲಿ ಮಹೇಂದರ್ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಆ ‘ಶಬ್ದ’ಕ್ಕೆ ಸೋನು ಗೌಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮಡಿಕೇರಿಯಲ್ಲಿ ಈಗಾಗಲೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ‘ಶಬ್ದ’ ಒಂದು ಥ್ರಿಲ್ಲರ್ ಸಿನಿಮಾವಾಗಿದೆ. ಪೋಲೀಸ್ ಪಾತ್ರದಲ್ಲಿ ಸೋನು ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ, ‘ಗುಳ್ಟು’ ಸಿನಿಮಾದಲ್ಲಿ ಕೂಡ ಇದೇ ಪಾತ್ರವನ್ನು ಸೋನು ನಿರ್ವಹಿಸಿದ್ದರು. ಉಳಿದಂತೆ, ಅತುಲ್ ಕುಲಕರ್ಣಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top