fbpx
ಸಮಾಚಾರ

ಡಿಸೆಂಬರ್ 20: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಸ್ಥಳ- ಬೆಂಗಳೂರು.
ಶುಕ್ರವಾರ, ಡಿಸೆಂಬರ್ 20 2019
ಸೂರ್ಯೋದಯ : 6:35 am
ಸೂರ್ಯಾಸ್ತ: 5:57 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಮಾರ್ಗಶಿರ
ಪಕ್ಷ : ಕೃಷ್ಣಪಕ್ಷ
ತಿಥಿ : ನವಮೀ 19:16
ನಕ್ಷತ್ರ: ಹಸ್ತ 21:09
ಯೋಗ: ಸೌಭಾಗ್ಯ 14:21
ಕರಣ: ತೈತುಲ 08:19 ಗರಿಜ 19:16

ಅಭಿಜಿತ್ ಮುಹುರ್ತ:11:54 am – 12:39 pm
ಅಮೃತಕಾಲ : 3:30 pm – 5:01 pm

ರಾಹುಕಾಲ- 10:52 am – 12:17 pm
ಯಮಗಂಡ ಕಾಲ- 3:05 pm – 4:29 pm
ಗುಳಿಕ ಕಾಲ- 8:04 am – 9:28 am

 

 

ಮಾನಸಿಕ ಚಂಚಲತೆ ವಿಪರೀತವಾಗುವುದರಿಂದ ಅದನ್ನು ಹತೋಟಿಯಲ್ಲಿಡಲು ಧ್ಯಾನ ಯೋಗಗಳನ್ನು ಅಭ್ಯಾಸ ಮಾಡಿ.  ನೆರೆಹೊರೆಯವರೊಂದಿಗೆ ಸೌಹಾರ್ದವಿರಲಿ. ಮತ್ತಾರದೋ ಉಪಕಾರಕ್ಕಾಗಿ ನೀವು ವೃಥಾ ತಿರುಗಾಡಬೇಕಾದ ಪ್ರಸಂಗ ಎದುರಾಗುವುದು. ಇದರಿಂದ ನಿಮ್ಮ ಆರೊಗ್ಯ ಕೆಡುವುದು.

ಆತಂಕದಿಂದಲೇ ತೆಗೆದುಕೊಂಡ ನಿರ್ಧಾರಗಳು ಇನ್ನು ಮುಂದೆ ಗಟ್ಟಿಯಾಗುತ್ತಲೇ ಹೋಗುತ್ತವೆ. ಇದರಿಂದ ನಿರ್ಧಾರಗಳು ಸ್ಪಷ್ಟವಾಗಿ ಕೈಗೊಳ್ಳಲಿರುವ ಕಾರ್ಯಗಳು ಹೊಸ ಸ್ವರೂಪ ಪಡೆಯಲಿವೆ.

ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ. ಇದರಿಂದ ಆಗಬೇಕಾದ ಹಾಗೂ ಆಗಬೇಕಾಗಿರುವ ಕೆಲಸ ಸುಲಭವಾಗಿ ನೆರವೇರಲಿದೆ. ಚಾಡಿ ಮಾತುಗಳಿಗೆ ಕಿವಿ ಕೊಡಬೇಡಿ. ಹಿರಿ ಕಿರಿಯರೊಡನೆ ಸ್ನೇಹಭಾವದಿಂದ ವರ್ತಿಸಿ. ಮಕ್ಕಳ ಖರ್ಚು ವೆಚ್ಚಗಳು ಜಾಸ್ತಿ ಆಗುವವು. ಅನವಶ್ಯಕ ವಸ್ತುಗಳನ್ನು ಖರೀದಿಸಬೇಡಿ.

ಹಿಂದಿನ ದುಡುಕುತನ, ಮುಂಗೋಪಗಳೆಲ್ಲ ಕಡಿಮೆಯಾಗಿ ಬಂಧುಗಳೊಡನೆ ಬೆರೆಯುವಿರಿ. ಹಿರಿಯರ ಆಶೀರ್ವಾದದಿಂದ ಹಮ್ಮಿಕೊಂಡ ಕಾರ್ಯಗಳು ಯಶಸ್ವಿಯಾಗುವವು. ಸೋದರರಲ್ಲಿ ಒಗ್ಗಟ್ಟು ಮೂಡಿ ಕುಟುಂಬದ ಕಷ್ಟ ಸುಖಗಳಲ್ಲಿ ಸಮಪಾಲು ಹಂಚಿಕೊಳ್ಳುವಿರಿ

 

ಮಾನಸಿಕ ಗೊಂದಲದಿಂದ ದೂರವಿರಿ. ಕೆಲವೊಮ್ಮೆ ನಿಮ್ಮ ಉದಾಸೀನದಿಂದ ವ್ಯವಹಾರದಲ್ಲಿ ಸಮಸ್ಯೆಗಳು ತಲೆದೋರುವ ಸಾಧ್ಯತೆ ಇದ್ದು ಸಂಯಮದಿಂದ ವರ್ತಿಸಿ. ಸಂಗಾತಿ ಆರೋಗ್ಯ ವ್ಯತ್ಯಯವಾಗುವುದು. ಮಕ್ಕಳ ಏಳಿಗೆ ಬಗ್ಗೆ ಒಂದು ದೃಢ ನಿರ್ಧಾರ ತಳೆಯುವಿರಿ. ಆದಾಯ ಮೂಲಗಳು ಹೆಚ್ಚಾಗಿ ಹಣಕಾಸಿನ ಸಮಸ್ಯೆಗಳು ಬಗೆಹರಿಯುವವು.

 

ಅರ್ಥವಿಲ್ಲದ ಖರ್ಚು, ಪ್ರಯೋಜನವಿಲ್ಲದ ತಿರುಗಾಟದಿಂದ ಉಂಟಾಗಿದ್ದ ಆರ್ಥಿಕ ಮುಗ್ಗಟ್ಟು ಸರಿಹೋಗಲಿದೆ. ಪರಿಸ್ಥಿತಿಯಿಂದ ಪಾಠ ಕಲಿಯುವುದು ಜಾಣರ ಲಕ್ಷ ಣ ಎಂಬುದು ನೆನಪಿರಲಿ. ಅತಿ ಮಾತಿನಿಂದ ಮನೆಯಲ್ಲಿ ಮುಜುಗರದ ವಾತಾವರಣ ಉಂಟಾಗಲಿದೆ. ಮಾತಿಗೆ ಒಂದು ಮಿತಿಯಿರಲಿ. ಅಪರಿಚಿತರ ಜೊತೆ ಹಣಕಾಸಿನ ವ್ಯವಹಾರ ಬೇಡ.

 

ನಿಮ್ಮ ನೇರ ನುಡಿಯನ್ನು ಎಲ್ಲರೂ ಮೆಚ್ಚುವರು. ಕೆಲವು ಜನ ಹಲವು ವಿಷಯಗಳ ಬಗ್ಗೆ ನಿಮ್ಮ ಸಲಹೆ ಕೇಳುವರು. ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವಿರಿ.

 

ಪ್ರತಿ ಕೆಲಸಗಳನ್ನು ನೀವೇ ಮಾಡಬೇಕೆಂಬ ಅಥವಾ ಎಲ್ಲದಕ್ಕೂ ನೀವೇ ಜವಾಬ್ದಾರರಿರಬೇಕೆಂಬ ಧಾವಂತ ಬೇಡ. ಮಾಡುವ ಕೆಲಸಗಳಲ್ಲಿ ತಾಳ್ಮೆ ಶಿಸ್ತು ಕಾಪಾಡಿಕೊಳ್ಳಿ. ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ದೇವತಾ ಕಾರ್ಯಗಳು ನೆರವೇರಲಿವೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ. ಅನಗತ್ಯ ಸಾಲಗಳನ್ನು ಮಾಡಬೇಡಿ.

 

ನಿಮ್ಮ ಜೀವನ ಶೈಲಿಯಲ್ಲಿ ಅಲ್ಪ ಬದಲಾವಣೆ ಮಾಡಿಕೊಳ್ಳದಿದ್ದರೆ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ತುಸು ಜಾಣತನ ತೋರದಿದ್ದರೆ ಅದು ನಿಮ್ಮ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಬಂಧುಗಳನ್ನು ಕೂಡಾ ನಿಮ್ಮ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದರಿಂದ ಶ್ರಮ ತುಸು ಕಡಿಮೆ ಆಗುವುದು.

ಹಲವು ವಿಚಾರಗಳಲ್ಲಿ ಬಹಳ ವಿವೇಚನೆಯಿಂದ ವ್ಯವಹರಿಸುವಿರಿ. ಈ ನಿಮ್ಮ ಬುದ್ಧಿವಂತಿಕೆ ಮೆಚ್ಚಿ ಸ್ನೇಹಿತರು ನಿಮ್ಮ ಸಲಹೆ, ಸೂಚನೆ ಪಡೆಯಲು ಮುಂದಾಗುವರು. ಅವರೊಂದಿಗೆ ಸಹಕರಿಸುವುದರಿಂದ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ಅದರಿಂದ ಪ್ರಯೋಜನ ಪಡೆಯುವಿರಿ. ಮನೆಯ ಆಗುಹೋಗುಗಳ ಬಗ್ಗೆ ಉದಾಸೀನ ತೋರದೆ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಇದರಿಂದ ಕುಟುಂಬ ಸದಸ್ಯರು ಸಂತೋಷ ವ್ಯಕ್ತಪಡಿಸುವರು.

 

 

ನಿಮ್ಮದು ಮೀನಿನಂತೆ ಚುರುಕಾದ ನಡೆನುಡಿ ಇದ್ದರು ಗಾಳಕ್ಕೆ ಸಿಕ್ಕ ಮೀನಿನಂತೆ ಒದ್ದಾಡುವಿರಿ. ವಿವೇಚನೆ ಬಳಸಿ ಕಾರ್ಯ ಪ್ರವೃತ್ತರಾಗಿ. ಅನವಶ್ಯಕ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಡಿ.

ನಿಮ್ಮ ಪ್ರತಿಭೆಯನ್ನು ಧಾರಾಳವಾಗಿ ಪ್ರದರ್ಶಿಸಲು ಎಲ್ಲಾ ರೀತಿಯ ಅವಕಾಶಗಳು ಹೇರಳವಾಗಿ ಬರುವವು. ಎಣ್ಣೆ ಬಂದಾಗ ಕಣ್ಣುಮುಚ್ಚಿಕೊಂಡರು ಎಂಬಂತೆ ಆಗಬಾರದು. ತಾನಾಗಿ ಬಂದ ಅವಕಾಶಗಳನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top