fbpx
ಸಮಾಚಾರ

IPL ಹರಾಜು: 4.4 ಕೋಟಿಗೆ ದೈತ್ಯ ಆಟಗಾರನನ್ನು ಖರೀದಿಸಿದ RCB

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಕೋಲ್ಕತಾದಲ್ಲಿ ಬಿರುಸಿನಿಂದ ಸಾಗುತ್ತಿದೆ. ಈ ನಡುವೆ ಜಿದ್ದಾಜಿದ್ದಿನಿಂದ ಸಾಗಿದ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸುತ್ತಿದೆ. ಈ ಹರಾಜಿನಲ್ಲಿ ಮೊದಲ ಆಟಗಾರನಾಗಿ RCB , ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಆ್ಯರೋನ್ ಫಿಂಚ್ ಖರೀದಿಸಿತು. ಬರೋಬ್ಬರಿ 4.4 ಕೋಟಿ ರೂಪಾಯಿ RCB ಖರೀದಿ ಮಾಡಿದೆ.

ಆಸ್ಟ್ರೇಲಿಯಾ ತಂಡದ ಏಕದಿನ ನಾಯಕ ಫಿಂಚ್ 2010ರಿಂದ ಐಪಿಎಲ್ ಟೂರ್ನಿಯಲ್ಲಿ ಸಕ್ರೀಯರಾಗಿದ್ದಾರೆ. ಆದರೆ 2019ರ ಹರಾಜಿನಲ್ಲಿ ಫಿಂಚ್ ಸೇಲಾಗದೇ ಉಳಿದಿದ್ದರು. ಇದೀಗ RCB ಫಿಂಚ್ ಖರೀದಿಸೋ ಮೂಲಕ ಬ್ಯಾಟಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠ ಗೊಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top