fbpx
ಸಮಾಚಾರ

FactCheck: ವೈರಲ್ ಆಗಿರೋ ಈ ಪೋಸ್ಟರ್ ಹಿಂದಿನ ಅಸಲಿ ಸತ್ಯಾಸತ್ಯತೆ ಏನು ಗೊತ್ತಾ?

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ವಿರುದ್ಧ ದೇಶವ್ಯಾಪಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈ ಕಾಯ್ದೆ ಜಾರಿಯಿಂದ ದೇಶದ ಯಾವುದೇ ಧರ್ಮದ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಲೇ ಬಂದಿದೆ. ಸಿಎಎ ಮತ್ತು ಎನ್​ಆರ್​ಸಿ ವಾಸ್ತವತೆಯನ್ನು ಮರೆಮಾಚುವ ಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.

ಹೀಗಿದ್ದರೂ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ದೇಶದ ಬಹುತೇಕ ರಾಜ್ಯಗಳಲ್ಲಿ ಈಗಲೂ ಪ್ರತಿಭಟನೆ ನಡೆಯುತ್ತಿವೆ. ಒಟ್ಟು 15 ರಾಜ್ಯದಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ. ಹೊಸದಿಲ್ಲಿ, ಉತ್ತರ ಪ್ರದೇಶ, ಬಿಹಾರ, ಗುಜರಾತ್‌, ಪಶ್ಚಿಮ ಬಂಗಾಳ, ಗುಜರಾತ್‌, ಕರ್ನಾಟಕ ಸೇರಿದಂತೆ ಒಟ್ಟು 15 ರಾಜ್ಯಗಳಲ್ಲಿ ಪ್ರತಿಭಟನೆ ಹೆಚ್ಚಾಗಿದೆ.

 

 

ಈತನ್ಮದ್ಯೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದು ವೈರಲ್ ಆಗಿದ್ದು ವ್ಯಾಪಕ ಚರ್ಚೆಗೆ ಒಳಗಾಗಿದೆ.. ವೈರಲ್ ಆಗಿರುವ ಫೋಟೋದಲ್ಲಿ ಪ್ರತಿಭಟನೆ ಮಾಡುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಕೈನಲ್ಲಿ ಪೋಸ್ಟರ್ ಒಂದನ್ನು ಹಿಡಿದುಕೊಂಡಿದ್ದು ಅದರ ಮೇಲೆ “ಹಿಂದೂ ಚೂ**ಯಾ” ಎಂದು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿದೆ.

ಆದರೆ ಈ ಪೋಸ್ಟರ್ ನ ಹಿಂಡಿರುವ ಅಸಲಿ ಸತ್ಯಾಸತ್ಯತೆ ಬಗ್ಗೆ ಸ್ವಲ್ಪ ತನಿಖೆ ನಡೆಸಿದಾಗ ಪೋಸ್ಟರ್ ನಲ್ಲಿ ಇರುವ ನಿಜವಾದ ಅಂಶ ಏನು ಎಂಬುದು ತಿಳಿಯುತ್ತದೆ. ಅಷ್ಟಕ್ಕೂ ಪ್ರತಿಭಟನೆ ನಡೆಸುತ್ತಿರುವ ವ್ಯಕ್ತಿಯ ಕೈನಲ್ಲಿರುವ ಪೋಸ್ಟರ್ ನಲ್ಲಿ ಇರುವುದು “ಹಿಂದೂ ಚೂ**ಯಾ” ಅಂತ ಅಲ್ಲ ಬದಲಾಗಿ “ನಾನು ಹಿಂದೂ ಆದರೆ ಚೂ**ಯಾ ಅಲ್ಲ” ಎಂದು. ಇಲ್ಲಿ ಆ ಪ್ರತಿಭಟನಾಕಾರ ತಾನು ಕೂಡ ಹಿಂದೂ ಧರ್ಮಕ್ಕೆ ಸೇರಿದ್ದೇನೆ ಎಂದು ಹೇಳಿಕೊಂಡಿದ್ದು ಆತ ಕೂಡ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ವಿರುದ್ಧ ಪ್ರತಿಭಟಿಸುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

 

 

ಆ ಪ್ರತಿಭಟನಕಾರನ ಪೋಸ್ಟರ್ ಅನ್ನೇ ದುರ್ಬಳಕೆ ಮಾಡಿಕೊಂಡಿರುವ ಕೆಲ ಕಿಡಿಗೇಡಿಗಳು “ಹಿಂದೂ ಚೂ**ಯಾ” ಎಂಬ ಪದ ಮಾತ್ರ ಕಾಣುವಂತೆ ಕ್ರಾಪ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಕೋಮಗಳ ಮದ್ಯೆ ಬೆಂಕಿ ಹಚ್ಚಿ ಸಮಾಜದಲ್ಲಿ ವಿಷ ಬಿತ್ತುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಸುಖಾಸುಮ್ಮನೆ ಧರ್ಮದ ಬಗ್ಗೆ ತಪ್ಪು ರೀತಿಯಲ್ಲಿ ಜನರ ದಾರಿ ತಪ್ಪಿಸಲು ಈ ರೀತಿ ಎಡಿಟ್ ಮಾಡಿ ಟ್ವೀಟ್ ಮಾಡಿರುವ ಕಿಡಿಗೇಡಿಗೆ ನೆಟ್ಟಿಗರು ಚಳಿ ಬಿಡಿಸುತ್ತಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top