fbpx
ಸಮಾಚಾರ

ಜೋರಾಗಿದೆ ಚಂದನ್​ ಶೆಟ್ಟಿ-ನಿವೇದಿತಾ ಗೌಡ ಮದುವೆ ತಯಾರಿ!

ಯುವ ದಸರಾದಲ್ಲಿ ಪ್ರಪೋಸ್ ಮಾಡಿ ಸುದ್ದಿಯಾಗಿದ್ದ ನಿವೇದಿತಾ ಗೌಡ- ಚಂದನ್ ಶೆಟ್ಟಿ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಚಂದನ್ ಹಾಗೂ ನಿವೇದಿತಾ ಮುಂದಿನ ವರ್ಷ ಫೆಬ್ರವರಿ ತಿಂಗಳ ಕೊನೆ ವಾರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಈಗಿನಿಂದಲೇ ಮದುವೆಯ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು. ಫೆಬ್ರವರಿ ತಿಂಗಳಿನಲ್ಲಿ ಮದುವೆ ನಡೆಯಲಿರುವ ಕಾಣರಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆಯಂತೆ.

ನಿವೇದಿತಾಗೆ ಚಂದನ್ ಪ್ರೇಮ ನಿವೇದನೆ
‘ಯುವ ದಸರಾ 2019’ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಲು ಆಗಮಿಸಿದ್ದ ಚಂದನ್‌ ಶೆಟ್ಟಿ, ನಿವೇದಿತಾ ಅವರಿಗೆ ವೇದಿಕೆಯಲ್ಲೇ ಉಂಗುರ ಹಾಕಿ ಶೀಘ್ರದಲ್ಲೇ ನಾವಿಬ್ಬರು ಮದುವೆ ಆಗುವುದಾಗಿ ಘೋಷಿಸಿದ್ದರು. ಆ ಮೂಲಕ ಬಿಗ್‌ ಬಾಸ್‌ ಮನೆಯಿಂದ ಹೊರಬಿದ್ದ ಮೇಲೆ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್‌ ನಿಜವಾಗಿಸಿದ್ದರು.

ಅಂದಹಾಗೆ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿ ಆಗಿದ್ದರು. ಇಲ್ಲೇ ಮೊದಲ ಬಾರಿಗೆ ಈ ಇಬ್ಬರು ಭೇಟಿಯಾಗಿದ್ದರು. ಕಾರ್ಯಕ್ರಮದಲ್ಲಿ ಸ್ನೇಹಿತರಾಗಿದ್ದ ಈ ಜೋಡಿ, ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಪ್ರೇಮಿಗಳಾದರು. ಇವರ ಪ್ರೀತಿಗೆ ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಸಿಕ್ಕಿದ್ದು, ಇದೀಗ ನಿಶ್ಚಿತಾರ್ಥಕ್ಕೆ ಸಜ್ಜಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top