fbpx
ಸಮಾಚಾರ

‘ಸಂಸ್ಕೃತ ಶ್ಲೋಕಗಳನ್ನು ಬೋಧಿಸಿದರೆ ಅತ್ಯಾಚಾರಗಳನ್ನು ತಡೆಯಬಹುದು’

ಸಂಸ್ಕೃತ ಶ್ಲೋಕಗಳ ಬೋಧನೆಯಿಂದ ಅತ್ಯಾಚಾರವನ್ನು ತಡೆಯಬಹುದು ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಹೇಳಿದ್ದಾರೆ. ದೇಶಾದ್ಯಂತ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಅತ್ಯಾಚಾರ ಘಟನೆಗಳನ್ನು ತಡೆಯಲು ಮಕ್ಕಳಿಗೆ ಸಂಸ್ಕೃತ ಶ್ಲೋಕಗಳನ್ನು ಬೋಧನೆ ಮಾಡಿ ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಪ್ರತಿಪಾದಿಸಿದ್ದಾರೆ.

ನಾಗ್ಪುರ ವಿವಿಯ ಜಮನಾಲಾಲ್‌ ಬಜಾಜ್‌ ಅವರ ಆಡಳಿತಾತ್ಮಕ ಭವನ ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯ ಮತ್ತು ದುಷ್ಟಜನರ ನಡುವಿನ ವ್ಯತ್ಯಾಸಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಇದೆ ವೇಳೆ ಸಂಸ್ಕೃತ ಶ್ಲೋಕಗಳ ಬೋಧನೆಯಿಂದ ಅತ್ಯಾಚಾರವನ್ನು ತಡೆಯಬಹುದು ಹೀಗಾಗಿ, ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕಗಳನ್ನು ಬೋಧಿಸಬೇಕೆಂದು ನಾಗ್ಪುರ ವಿವಿ ಭೋದಕ ಸಿಬ್ಬಂದಿಗೆ ಸೂಚಿಸಿದ್ದಾರೆ.

ಅಷ್ಟೇ ಅಲ್ಲದೆ ಹಣವಂತರು ತಮ್ಮ ಹಣ, ಜ್ಞಾನ, ಅಧಿಕಾರವನ್ನು ಮಹಿಳೆಯರ ಮೇಲೆ ದೌರ್ಜನ್ಯಕ್ಕಾಗಿ ದುರುಪಯೋಗಪಡಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top