fbpx
ಸಮಾಚಾರ

‘ಬ್ರೇಕಪ್’ ಮಾಡಿಕೊಳ್ಳಲು ಮುಂದಾದ ‘ಭರಾಟೆ’ ನಟಿ ಶ್ರೀಲೀಲಾ!

‘ಕಿಸ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಶ್ರೀಲೀಲಾ ತನ್ನ ಬ್ಯುಟಿ ಇಂದಲೇ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ‘ಭರಾಟೆ’ ಹಾಗೂ ‘ಕಿಸ್‌’ ಎರಡೂ ಚಿತ್ರಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿದಂತ ಸಿನಿಮಾಗಳು. ತೆರೆ ಕಂಡು ಬಾಕ್ಸ್‌ ಆಫೀಸ್ ಕಲೆಕ್ಷನ್‌ ಪಡೆದ ಸಿನಿಮಾಗಳಲ್ಲಿ ನಟಿಸಿರುವ ಶ್ರೀ ಲೀಲಾ ಇದೀಗ ಬ್ರೇಕಪ್ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಆದರೆ ಅವರ ಬ್ರೇಕಪ್ ವೈಯಕ್ತಿಕ ಜೀವನದಲ್ಲಿ ಅಲ್ಲ, ಬದಲಾಗಿ ಸಿನಿಮಾದಲ್ಲಿ.

 

 

ನಟಿ ಶ್ರೀಲೀಲಾ ಮತ್ತು ನಟ ವಿಹಾನ್​ ಹೊಸ ಸಿನಿಮಾವೊಂದರಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಆ ಸಿನಿಮಾದ ಹೆಸರೇ ‘ಲೆಟ್ಸ್​​ ಬ್ರೇಕಪ್​‘. ಇನ್ನು ಸಿನಿಮಾದ ಟೈಟಲ್​ ನೋಡಿದಾಗಲೇ ಇದು ಪಕ್ಕಾ ಲವ್​ ಸ್ಟೋರಿ ಸಿನಿಮಾ ಎಂದು ಹೇಳಲಾಗುತ್ತಿದೆ. ವಿಹಾನ್​​ ಮತ್ತು ಶ್ರೀಲೀಲಾ ಈ ಸಿನಿಮಾದಲ್ಲಿ ಎಂಬಿಎ ಸ್ಟೂಡೆಂಟ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಜಯಣ್ಣ ಕಂಬೈನ್ಸ್’ ಮೂಲಕ ಅದ್ದೂರಿ ಆಗಿಯೇ ನಿರ್ಮಾಣ ಆಗಲಿರುವ ಈ ಸಿನಿಮಾಗೆ ಹೊಸ ನಿರ್ದೇಶಕ ಸ್ವರೂಪ್ ಆಕ್ಷನ್-ಕಟ್ ಹೇಳಲಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿ ಇರುವ ಈ ಸಿನಿಮಾದಲ್ಲಿ ವಿಹಾನ್-ಶ್ರೀಲೀಲಾ ಇಬ್ಬರೂ ತುಂಬ ಆಕರ್ಷಕವಾಗಿ ಕಾಣಿಸಲಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top