fbpx
ಸಮಾಚಾರ

“ಅಯೋದ್ಯೆ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಕೊಡಲ್ಲ” ಅಮಿತ್ ಷಾ

‘ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ರಚನೆಯಾಗುವ ಟ್ರಸ್ಟ್‌ನಲ್ಲಿ ಬಿಜೆಪಿಯ ಯಾವ ಸದಸ್ಯರೂ ಇರುವುದಿಲ್ಲ. ಅಲ್ಲದೆ, ಸರ್ಕಾರವು ಮಂದಿರ ಕಟ್ಟಲು ಯಾವುದೇ ಹಣ ವಿನಿಯೋಗಿಸುವುದಿಲ್ಲ’ ಎಂದು ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಇತ್ತೀಚಿಗೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಮಂದಿರ ಕಟ್ಟಲು ಸರ್ಕಾರದ ಹಣ ವಿನಿಯೋಗಿಸುವುದಿಲ್ಲ. ಮಂದಿರ ನಿರ್ಮಾಣಕ್ಕೆ ರಚನೆಯಾಗುವ ಟ್ರಸ್ಟ್ ನಲ್ಲಿ ಬಿಜೆಪಿ ಸದಸ್ಯರೂ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ಸಮಾಜದಿಂದ ಹಣ ಸಂಗ್ರಹಿಸಿ ಮಂದಿರ ನಿರ್ಮಿಸುತ್ತಾರೆ. ನಾವೇನು ಅದರಲ್ಲಿ ತಲೆ ಹಾಕುವುದಿಲ್ಲ’ ಎಂದು ಹೇಳಿದ್ದಾರೆ.

‘ಇತ್ತೀಚೆಗೆ ರಾಮಮಂದಿರ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌, ತೀರ್ಪು ಪ್ರಕಟವಾದ 3 ತಿಂಗಳೊಳಗೆ ಟ್ರಸ್ಟ್‌ ರಚನೆಯಾಗಬೇಕು ಎಂದು ಆದೇಶಿಸಿದೆ. ಅದು ನೀಡಿರುವ ಗಡುವಿನೊಳಗೆ ಟ್ರಸ್ಟ್‌ ರಚನೆಯಾಗುವ ನಂಬಿಕೆ ನನ್ನದು’ ಎಂದ ಶಾ, ‘ಮಂದಿರ ನಿರ್ಮಾಣದಲ್ಲಿ ಪಾಲ್ಗೊಂಡವರೇ ನಿರ್ಮಾಣ ಯಾವಾಗ ಮುಗಿಯಬೇಕು ಎಂಬುದನ್ನು ನಿರ್ಧರಿಸುತ್ತಾರೆ’ ಎಂದರು.

ಅಂದಹಾಗೆ ಇತ್ತೀಚೆಗೆ ಜಾರ್ಖಂಡ್‌ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ್ದ ಶಾ, ‘ಇನ್ನು 4 ತಿಂಗಳೊಳಗೆ ರಾಮಮಂದಿರ ನಿರ್ಮಾಣ ಆರಂಭವಾಗಲಿದೆ’ ಎಂದಿದ್ದನ್ನು ಇಲ್ಲಿದ್ದನ್ನು ಇಲ್ಲಿ ಸ್ಮರಿಸಬಹುದು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top