fbpx
ಸಮಾಚಾರ

ರಶ್ಮಿಕಾ ಜೊತೆಗಿನ ಲವ್ ಬ್ರೇಕಪ್‌ ಬಗ್ಗೆ ಕೊನೆಗೂ ಮೌನ ಮುರಿದ ರಕ್ಷಿತ್‌ ಶೆಟ್ಟಿ!

ಸ್ಯಾಂಡಲ್ ವುಡ್’ನಲ್ಲಿ ಹಾಟೆಸ್ಟ್ ಜೋಡಿ ಎಂತಲೇ ಹೆಸರು ಪಡೆದಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಜೋಡಿ ಬ್ರೇಕಪ್ ಮಾಡ್ಕೊಂಡು ವರ್ಷಗಳೇ ಕಳೆದಿದೆ., ಈ ಬಗ್ಗೆ ಕ್ಷಣಕ್ಕೊಂದರಂತೆ ಹೊರ ಬೀಳುತ್ತಿದ್ದ ರೂಮರ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್‌ಗಳು ಒಂದಷ್ಟು ದಿನ ಸಿಕ್ಕಾಪಟ್ಟೆ ಹರಿದಾಡಿತ್ತು. ಈಗಲೂ ರಕ್ಷಿತ್ ಅಥವಾ ರಶ್ಮಿಕಾ ಬ್ರೇಕಪ್ ಸದ್ದು ಮಾಡುತ್ತಲೇ ಇರುತ್ತದೆ.

ಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಲವ್ ಬ್ರೇಕಪ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್ ಶೆಟ್ಟಿ ‘ಜೀವನ ನಮಗೆ ಸಾಕಷ್ಟು ಅನುಭವಗಳನ್ನು ಕೊಡುತ್ತದೆ. ಅವುಗಳಲ್ಲಿ ಒಂದಷ್ಟು ಒಳ್ಳೆಯ ಅನುಭವಗಳು, ಇನ್ನೊಂದಿಷ್ಟು ಕೆಟ್ಟ ಅನುಭವಗಳು. ಪ್ರತಿಯೊಂದು ಅನುಭವಗಳೂ ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಮುಂದಕ್ಕೆ ಕೊಂಡೊಯ್ಯುತ್ತದೆ’ ಎಂದಿದ್ದಾರೆ

‘ಜೀವನದಲ್ಲಿ ಸಾಕಷ್ಟು ಬ್ರೇಕಪ್‌ಗಳಾಗುತ್ತದೆ. ಅದು ಸಂಬಂಧದಲ್ಲೇ ಇರಬಹುದು, ಫ್ರೆಂಡ್‌ಶಿಪ್‌ನಲ್ಲೇ ಇರಬಹುದು. ಇದನ್ನೆಲ್ಲಾ ದಾಟಿಕೊಂಡು ಮುಂದೆ ಹೋಗಬೇಕು. ಇವೆಲ್ಲಾ ಚಿಕ್ಕ ಚಿಕ್ಕ ಸಂಗತಿಗಳು ಇಂಥಾ ಬ್ರೇಕಪ್ ಗಳ ಬಗ್ಗೆಯೇ ಹೆಚ್ಚು ಚಿಂತಿಸುತ್ತಾ ಕೂರಬಾರದು’ ಎಂದು ರಕ್ಷಿತ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top