fbpx
ಸಮಾಚಾರ

ಅಡುಗೆ ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟಿ

ಕಿರುತೆರೆ ನಟಿ ಹಾಗೂ ಸೆಲಿಬ್ರಿಟಿ ಜಗಿ ಜಾನ್ ಅವರು ತಮ್ಮ ಮನೆಯಲ್ಲಿಯೇ ಮೃತವಾಗಿ ಪತ್ತೆಯಾಗಿದ್ದಾರೆ. ಕೇರಳದ ಕುರುವನ್ಕೋರ್ ನಲ್ಲಿರುವ ಒಂದು ಫ್ಲಾಟ್ ನಲ್ಲಿ ಅವರು ತಮ್ಮ ತಾಯಿಯ ಜೊತೆಗೆ ವಾಸವಾಗಿದ್ದರು. ಫ್ಲಾಟ್ ನ ಕಿಚನ್ ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಸದ್ಯ ಪೊಲೀಸರು ಸಾವಿನ ಕಾರಣಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ANI ಸುದ್ದಿ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು ಮಂಗಳವಾರ ಸಂಬಂಧಿತರ ವಿಚಾರಣೆ ನಡೆಸಿ ಪೋಸ್ಟ್ ಮಾರ್ಟಂ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಆ ಬಳಿಕ ಮಾತ್ರವೇ ಅವರ ಸಾವಿನ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಜಗಿ ಅವರ ದೇಹದ ಮೇಲೆ ಯಾವುದೇ ರೀತಿಯ ಗಾಯದ ನಿಶಾನೆ ಇಲ್ಲ ಎನ್ನಲಾಗಿದೆ.

ಮಾಧ್ಯಮಗಳ ವರದಿಗಳ ಪ್ರಕಾರ ಜಗಿ ಅವರ ನೆರೆಯಲ್ಲಿ ಇರುವ ವ್ಯಕ್ತಿಯೊಬ್ಬರು ಜಗಿ ಅವರ ಮೃತದೇಹವನ್ನು ನೋಡಿದ್ದಾರೆ ಎನ್ನಲಾಗಿದೆ. ಜಗಿ ಅವರ ಮಿತ್ರರೊಬ್ಬರು ಜಗಿ ತಮ್ಮ ಫೋನ್ ಕರೆಗೆ ರಿಸ್ಪಾನ್ಸ್ ಮಾಡುತ್ತಿಲ್ಲ ಸ್ವಲ್ಪ ನೋಡಿ ಎಂದು ಅವರ ನೆರೆಯಲ್ಲಿ ವಾಸವಾಗಿರುವ ವ್ಯಕ್ತಿಗೆ ಕರೆ ಮಾಡಿ ಸೂಚಿಸಿದ್ದರು ಎನ್ನಲಾಗಿದೆ.

45 ವರ್ಷದ ಜಗಿ ನಟಿ, ರೂಪದರ್ಶಿ, ಗಾಯಕಿ ಮತ್ತು ಸಾಕಷ್ಟು ಬ್ಯೂಟಿ ಸ್ಪರ್ಧೆಯಲ್ಲಿ ಜಡ್ಜ್ ಆಗಿ ಗುರುತಿಸಿ ಕೊಂಡಿದ್ದರು. ಜಾನ್ ಆತ್ಮ ಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿಯವಳಲ್ಲ, ಆಕೆಯ ಸಾವು ಸಹಜವಲ್ಲ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಜಗಿ ಜಾನ್ ತಾಯಿಯ ಜೊತೆ ಫ್ಲಾಟ್ ನಲ್ಲಿ ವಾಸವಾಗಿದ್ದರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top