fbpx
ಸಮಾಚಾರ

ಕೇರಳದಲ್ಲಿ ಸಿಎಂ ಯಡಿಯೂರಪ್ಪ ಕಾರಿಗೆ ಮುತ್ತಿಗೆ: ಜಗ್ಗೇಶ್ ತೀವ್ರ ವಿಷಾದ

ಸೂರ್ಯಗ್ರಹಣ ಹಿನ್ನೆಲೆ ದೋಷ ಪರಿಹಾರಕ್ಕಾಗಿ ಕೇರಳದ ದೇವಾಲಯಕ್ಕೆ ಇಂದು ಭೇಟಿ ನೀಡಿದ ಸಿಎಂ ಬಿಎಸ್​ ಯಡಿಯೂರಪ್ಪಗೆ ಪ್ರತಿಭಟನೆ ಬಿಸಿ ತಟ್ಟಿತ್ತು. ತಿರುವನಂತಪುರಕ್ಕೆ ಭೇಟಿ ನೀಡುತ್ತಿದ್ದಂತೆ ಅವರಿಗೆ ಕಪ್ಪು ಪಟ್ಟಿ ಪ್ರದರ್ಶಿಸಿ, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆ ಕುರಿತು ನಟ ಜಗ್ಗೇಶ್ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

 

 

ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತ ಪಡಿಸಿರುವ ಬಿಜೆಪಿ ಮುಖಂಡ ಜಗ್ಗೇಶ್, ಈ ಬಗ್ಗೆ ಟ್ವೀಟ್ ಅನ್ನು ಮಾಡಿದ್ದಾರೆ. “ದೇವರ ಕಾರ್ಯಕ್ಕೆ ದೇವಾಲಯಕ್ಕೆ ಹೋದಾಗ ನಮ್ಮವರಿಗೆ ಕೊಟ್ಟ ಗೌರವ!” “ಅದೇ ನಮ್ಮ ರಾಜ್ಯದಲ್ಲಿ ಉದಾರಿತನ ತೋರಿ ಸರ್ವೇ ಜನಃ ಸುಖಿನೋಭವಂತು ಎನ್ನುತ್ತೇವೆ! ಇಂಥ ದೃಶ್ಯ ಕಂಡಮೇಲಾದರೂ, ನಾವು ಬದಲಾಗದಿದ್ದರೆ! ನಮ್ಮಂತಹ ದೌರ್ಭಲ್ಯ ಹೃದಯದವರು ಮತ್ಯಾರು!” “ಕನ್ನಡಿಗರು ಕನ್ನಡಿಗನಿಗಾಗಿ ಬಾಳುವ ಗುಣ ರೂಢಿಸಿಕೊಳ್ಳುವ! ಕನ್ನಡಿಗ ಮೊದಲು ಕನ್ನಡಿಗನಿಗೆ ಹರಸುವವನಾಗಲಿ!” ಇದು ಜಗ್ಗೇಶ್ ಮಾಡಿರುವ ಟ್ವೀಟ್.

ಏನಿದು ಘಟನೆ?
ವಿಶೇಷ ಪೂಜೆ ಹೋಮ ಹವನ ಮಾಡಿಸಲು ಸಿಎಂ ಯಡಿಯೂರಪ್ಪ ನಿನ್ನೆ ರಾತ್ರಿ ಕೇರಳಕ್ಕೆ ತೆರಳಿದ್ದರು. ಬೆಂಗಳೂರಿನಿಂದ ನೇರವಾಗಿ ತಿರುವನಂತಪುರಂ ಗೆ ತೆರಳಿದ್ದ ಸಿಎಂಗೆ ಏರಪೋರ್ಟ್ ನಲ್ಲಿಯೇ ಪ್ರತಿಭಟನೆ ಬಿಸಿ ತಟ್ಟಿತ್ತು. ಕೇರಳದ ಏರ್ ಪೋರ್ಟ್ ನ ಹೊರ ಭಾಗದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಗೋ ಬ್ಯಾಕ್ ಬಿ.ಎಸ್ ವೈ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಬಳಿಕ ಕಣ್ಣೂರಿನ ದೇವಸ್ಥಾನವೊಂದರಲ್ಲಿ ದರ್ಶನ ಪಡೆಯಲು ಹೊರಡುವಾಗಲೂ ಮಾರ್ಗ ಮಧ್ಯದಲ್ಲಿ 50ಕ್ಕೂ ಅಧಿಕ ಪ್ರತಿಭಟನಾಕಾರರ ಗುಂಪು ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿತ್ತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top