fbpx
ಸಮಾಚಾರ

“ಶ್ರೀಗಳು ನನ್ನ ಪಾಲಿಗೆ ಶ್ರೀಕೃಷ್ಣನಂತೆ ಕಾಣುತ್ತಿದ್ದರು” ಪೇಜಾವರರ ಕಾರು ಚಾಲಕ ಮೊಹಮದ್ ಆರಿಫ್

ಹಿಂದೂ ಧರ್ಮದ ಪರಿಚಾರಕ ಪೇಜಾವರ ಶ್ರೀಗಳ ನೆಚ್ಚಿನ ಕಾರು ಚಾಲಕರಾಗಿದ್ದರು ಆರಿಫ್. ಶ್ರೀಗಳ ಜೊತೆ 9 ವರ್ಷದ ಪರಿಚಯವಾದರೂ ಕಳೆದ 4 ವರ್ಷಗಳಿಂದ ಆರಿಫ್ ಶ್ರೀಗಳ ಕಾರ್ ಡ್ರೈವರ್ ಆಗಿದ್ದರು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಆರಿಫ್ ಅವರ ಕನಸು ಈ ಬಾರಿ ನೆರವೇರುತ್ತಿತ್ತು. ಆದರೆ ಆ ಕನಸು ಈಡೇರಿಸುವ ಮುನ್ನವೇ
ಶ್ರೀಗಳು ಕೊನೆಯುಸಿರೆಳೆದಿದ್ದಾರೆ.

“ಪೇಜಾವರ ಶ್ರೀಗಳು ನನಗೊಂದು ಮಾತು ಕೊಟ್ಟಿದ್ದರು. ಆದರೆ ಈಗ ಆ ಮಾತು ಮರೆತು ಮೌನವಾಗಿದ್ದಾರೆ” ಎಂದು ಶ್ರೀಗಳ ಕಾರು ಚಾಲಕ, ಮುಸ್ಲಿಂ ಯುವಕ ಆರಿಫ್ ಭಾವುಕರಾಗಿದ್ದಾರೆ. ಕೆಲವು ವರ್ಷಗಳಿಂದ ಶ್ರೀಗಳ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ನನಗೆ ಶ್ರೀಗಳು ನನ್ನ ಪಾಲಿಗೆ ಶ್ರೀಕೃಷ್ಣನಂತೆ ಕಾಣುತ್ತಿದ್ದರು. ನಮ್ಮ ಕುಟುಂಬದ ಜತೆಯೂ ಆತ್ಮೀಯ ಬಾಂಧವ್ಯ ಹೊಂದಿದ್ದರು. ಕೋಮು ಸಾಮರಸ್ಯ ಕಾಪಾಡುವಲ್ಲಿ ಶ್ರಮಿಸುತ್ತಿದ್ದರು ಎಂದರು.

ಆದರೆ ಶ್ರೀಗಳ 90ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಆಸೆ ಹೊಂದಿದ್ದು, ಜತೆಗೆ ರಕ್ತದಾನ ಶಿಬಿರದ ವ್ಯವಸ್ಥೆ ಕೂಡ ಮಾಡಿದ್ದರು. ಮುಸ್ಲಿಂ ಯುವಕರು, ಸಂಘಟನೆಗಳು ಸೇರಿ ಶ್ರೀಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಿದ್ದೇವು. ಆದರೆ ಈಗ ಶ್ರೀಗಳು ಶ್ರೀಕೃಷ್ಣನ ಪಾದ ಸೇರುವ ಮೂಲಕ ಕೊನೆಯಾಸೆ ಈಡೇರದಂತಾಗಿದೆ ಎಂದು ಅಲವತ್ತುಕೊಂಡರು.

. ಮುಸ್ಲಿಮ್ ಸಮುದಾಯದ ಜನರಿಗೆ ತೊಂದರೆಯಾದರೆ ಆರ್ಥಿಕ ಸಹಾಯ ಹಾಗೂ ಮತ್ತಿತರ ರೀತಿಯ ಸಹಕಾರವನ್ನು ನೀಡುತ್ತಿದ್ದರು. ಈ ಬಾರಿಯ ಶ್ರೀಗಳ ಜನ್ಮದಿನವನ್ನು ಆಚರಿಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಶ್ರೀಗಳು ಬರುವುದಾಗಿ ಒಪ್ಪಿಕೊಂಡಿದ್ದರು. ಆದರೆ ಇದೀಗ ನಮ್ಮೆಲ್ಲರನ್ನು ಪ್ರೀತಿಸುತ್ತಿದ್ದ ಸ್ವಾಮೀಜಿಯವರನ್ನು ನಾವು ಇಂದು ಕಳೆದುಕೊಂಡಿದ್ದೇವೆ” ಎಂದು ಆರಿಫ್ ತಮ್ಮ ಮನದ ನೋವನ್ನು ಹೊರಹಾಕಿದ್ದಾರೆ.

ಶ್ರೀಗಳ ಪರ್ಯಾಯ ಸಂದರ್ಭದಲ್ಲಿ ಆರೀಫ್ ಹಾಗೂ ಅವರ ತಂಡ ಮಠದಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಸ್ವಾಮೀಜಿಯವರು 2017 ರಲ್ಲಿ ಮಠದ ಆವರಣದಲ್ಲೇ ಮುಸ್ಲಿಮರಿಗಾಗಿ ಇಫ್ತಾರ್ ಕೂಟವನ್ನು ಹಮ್ಮಿಕೊಂಡಿದ್ದರು. ಆದರೆ ಹಿಂದೂಪರ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಹೀಗಿದ್ದರೂ ಸ್ವಾಮೀಜಿ ಇದನ್ನು ದಿಟ್ಟವಾಗಿ ಎದುರಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಎಂದು ನೆನಪಿಸಿಕೊಳ್ಳುತ್ತಾರೆ ಮುಹಮ್ಮದ್ ಆರೀಫ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top