fbpx
ಸಮಾಚಾರ

ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ ವಿಶ್ವಕಪ್ ಹೀರೋ, ಹ್ಯಾಟ್ರಿಕ್ ಸರದಾರ ಇರ್ಫಾನ್ ಪಠಾಣ್

ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಶನಿವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಕಂಡ ಶ್ರೇಷ್ಠ ಆಲ್​ರೌಂಡರ್​ಗಳ ಪೈಕಿ ಒಬ್ಬರಾಗಿರುವ 35 ವರ್ಷದ ಪಠಾಣ್ ಅವರ 17 ವರ್ಷಗಳ ವೃತ್ತಿ ಜೀವನ ಇವತ್ತಿಗೆ ಅಂತ್ಯಗೊಂಡಿದೆ.

. 2003ರಲ್ಲಿಆಸ್ಪ್ರೇಲಿಯಾ ತಂಡದ ವಿರುದ್ಧ ಅಡಿಲೇಡ್‌ನಲ್ಲಿ ಮೊದಲ ಪಂದ್ಯವಾಡಿದ್ದ ಇರ್ಫಾನ್‌ 2012ರ ಅಕ್ಟೋಬರ್‌ ತನಕ ಭಾರತ ತಂಡದಲ್ಲಿದ್ದರು. ಪಾಕಿಸ್ತಾನ ಪ್ರವಾಸದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದಿರುವುದು ಹಾಗೂ 2007ರ ಟಿ20 ವಿಶ್ವ ಕಪ್‌ ಫೈನಲ್‌ನಲ್ಲಿ ಪಂದ್ಯಶ್ರೇಷ್ಠರೆನಿಸಿಕೊಂಡಿರುವುದು ಪಠಾಣರ ಸ್ಮರಣೀಯ ಸಾಧನೆಗಳು.

ಇರ್ಫಾನ್ ಪಠಾಣ್ ಕ್ರಿಕೆಟ್ ಅಂಕಿ ಅಂಶ:

ಟೆಸ್ಟ್ ಕ್ರಿಕೆಟ್:
ಪಂದ್ಯ 29; ರನ್ 1,105; ಸರಾಸರಿ 31.57; ಶತಕ 1; ವಿಕೆಟ್ 100ಏಕದಿನ ಕ್ರಿಕೆಟ್:
ಪಂದ್ಯ 120; ರನ್ 1,544; ಸರಾಸರಿ 23.39; ವಿಕೆಟ್ 173

ಅಂತಾರಾಷ್ಟ್ರೀಯ ಟಿ20:
ಪಂದ್ಯ 24; ರನ್ 172; ಸರಾಸರಿ 24.57; ವಿಕೆಟ್ 28

ಪ್ರಥಮ ದರ್ಜೆ ಕ್ರಿಕೆಟ್:
ಪಂದ್ಯ 122; ರನ್ 4,559; ಸರಾಸರಿ 30.39; ವಿಕೆಟ್ 384

ಇತರ ಟಿ20 ಕ್ರಿಕೆಟ್:
ಪಂದ್ಯ 177; ರನ್ 1,966; ಸರಾಸರಿ 22.86; ವಿಕೆಟ್ 173

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top