fbpx
ಸಮಾಚಾರ

ಪಿಚ್ ಒಣಗಿಸಲು ಐರನ್ ಬಾಕ್ಸ್, ಹೇರ್ ಡ್ರೈಯರ್ ಬಳಕೆ: ಬಿಸಿಸಿಐಗೆ ಇಂಥಾ ದಾರಿದ್ರ್ಯವೇ? ಎಂದು ಟ್ರೊಲ್.

ಇಂಡೋ-ಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಪಂದ್ಯ ಒಂದೂ ಎಸೆತ ಕಾಣದೇ ರದ್ದಾಗಿದೆ. ವರ್ಷದ ಮೊದಲ ಪಂದ್ಯವೇ ಮಳೆಯಿಂದ ರದ್ದಾಯಿತು. ಬರ್ಸಾಪುರ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಟಾಸ್ ಮುಗಿದ ಬೆನ್ನಲ್ಲೇ ನಿರಂತರ ಮಳೆ ಸುರಿಯಿತು. ಹೀಗಾಗಿ ಪಂದ್ಯವನ್ನು ಕೆಲಕಾಲ ಮುಂದೂಡಲಾಯಿತು.

ಸ್ವಲ್ಪ ಹೊತ್ತಿನ ಬಳಿಕ ಮಳೆ ನಿತ್ತಿತಾದರೂ ಅಸ್ಸಾಂ ಕ್ರಿಕೆಟ್​ ಅಸೋಶಿಯೇಷನ್​ನ ಕ್ರೀಡಾಂಗಣದ ಸಿಬ್ಬಂದಿಗಳು ಒದ್ದೆಯಾಗಿದ್ದ ಪಿಚ್‌ ಒಣಗಿಸಲು ಹರಸಾಹಸ ಪಟ್ಟರು. ಆಟ ಶುರು ಮಾಡಲು ಔಟ್‌ಫೀಲ್ಡ್‌ ಉತ್ತಮವಾಗಿತ್ತು. ಆದರೆ, ಕೈಕೊಟ್ಟಿದ್ದು ಒದ್ದೆಯಾದ ಪಿಚ್‌. ಪಿಚ್‌ನ ಮೇಲೆ ಹೊದಿಕೆ ಹೊದಿಸಲಾಗಿತ್ತಾದರೂ, ನೀರಿನ ಸೋರಿಕೆಯಾಗಿ ಪಿಚ್‌ನ ಬಹುತೇಕ ಭಾಗಗಳಲ್ಲಿ ತೇವಾಂಶ ಹೆಚ್ಚಿತ್ತು.

 

 

ಓದೀಯ ಪಿಚ್ ಅನ್ನು ಒಣಗಿಸಲು ಸಿಬ್ಬಂದಿಗಳು ವ್ಯಾಕ್ಯೂಮ್​ ಕ್ಲೀನರ್​ ತಂದು ನೀರು ತೆಗೆದು, ಡ್ರೈ ಮಾಡುವ ಪ್ರಯತ್ನ ಮಾಡಿದರು. ಮತ್ತೊಬ್ಬರು ಇಸ್ತ್ರಿ ಪೆಟ್ಟಿಗೆ ತಂದು ಪಿಚ್​ಮೇಲೆ ಇಸ್ತ್ರಿ ಮಾಡಿ ಒಣಗಿಸುವ ಪ್ರಯತ್ನ ಪಟ್ಟರು. ಇನ್ನೊಬ್ಬರು ಹೇರ್​ ಡ್ರೈಯರ್​ ತಂದು ಪಿಚ್​​ ಅನ್ನು ಒಣಗಿಸಲು ಮುಂದಾದರೂ ವಿಫಲವಾಯಿತು.

ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಪಿಚ್ ಒಣಗಿಸಲು ಇಸ್ತ್ರಿ ಪೆಟ್ಟಿಗೆ, ವ್ಯಾಕ್ಯೂಮ್ ಕ್ಲೀನರ್, ಹೇರ್ ಡ್ರೈಯರ್ ಬಳಸಿದ್ದನ್ನು ಜನ ಟ್ರೋಲ್ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ತಂತ್ರಜ್ಞಾನದ ಸಹಾಯ ಪಡೆದು ಪಿಚ್ ಒಣಗಿಸಬಹುದಿತ್ತು. ಈ ರೀತಿ ರದ್ದು ಮಾಡುವುದು ಎಷ್ಟು ಸರಿ? ವಾಟ್ ಎ ಶೇಮ್ ಎಂದು ಬರೆದು ಆಕ್ರೋಶ ಹೊರ ಹಾಕುತ್ತಿದ್ದಾರೆ.

 

 

ಪಾಕಿಸ್ತಾನ ಅಭಿಮಾನಿಗಳಂತೂ ಭಾರತದ ಪಾಡನ್ನು ನೋಡಿ ಹೆಲಿಕಾಪ್ಟರ್ ಕಳುಹಿಸಿಕೊಡಲು ಮುಂದಾಗಿದ್ದರು. ಒಟ್ಟಿನಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿದೆ. ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಪಿಚ್ ಒಣಗಿಸಲು ಹೆಲಿಕಾಪ್ಟರ್ ಬಳಸಲಾಗುತ್ತಿತ್ತು. ಭಾರತದ ಪರಿಸ್ಥಿತಿಯನ್ನು ನೋಡಿ ಅಲ್ಲಿನ ಅಭಿಮಾನಿಗಳು ಗೇಲಿ ಮಾಡಿದ್ದಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top