fbpx
ಸಮಾಚಾರ

ಅಂಬಿಯ ಪ್ರೀತಿಯ ನಾಯಿ ‘ಕನ್ವರ್ ಲಾಲ್’ ಜೊತೆ ದರ್ಶನ್ ಸೆಲ್ಫಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿಯ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇನಿಲ್ಲ. ಅವರ ಫಾರ್ಮ್ ಹೌಸ್, ಅಲ್ಲಿರೋ ಹಸು, ಕುದುರೆಗಳ ಕಥೆಯೆಲ್ಲ ಅಭಿಮಾನಿಗಳ ಪಾಲಿಗೆ ಹೊಸತೇನಲ್ಲ. ದರ್ಶನ್ ಮೈಸೂರು ಮೃಗಾಲಯದಲ್ಲಿನ ಕೆಲ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಲಹುತ್ತಿರೋದೂ ಕೂಡಾ ತಿಳಿದದ್ದೇ. ಇನ್ನು ಬೆಂಗಳೂರಿನ ದರ್ಶನ್ ಅವರ ಮನೆ ಮುಂದೆ ತರಹೇವಾರಿ ಪ್ರಬೇಧದ ನಾಯಿಗಳು ಕಾವಲಿಗಿರುತ್ತವೆ.

ಇಂಥಾ ದರ್ಶನ್ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪ್ರೀತಿಯ ಶ್ವಾನ ಕನ್ವರ್ ಲಾಲ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅಂಬರೀಶ್ ಮನೆಗೆ ದರ್ಶನ್ ಭೇಟಿ ಕೊಟ್ಟಿದ್ದರು. ಈ ವೇಳೆ ಕನ್ವರ್ ಲಾಲ್ ನೋಡಿ ದರ್ಶನ್ ಖುಷಿ ಪಟ್ಟಿದ್ದಾರೆ. ಜೊತೆಗೆ ಕಲ್ವರ್ ಲಾಲ್ ಜೊತೆ ಕಾಲಕಳೆದಿದ್ದು, ಅವನೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದೀಗ ಈ ಫೋಟೋವನ್ನು ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಅಂಬರೀಶ್ ಅವರಿಗೆ ಶ್ವಾನ ಎಂದರೆ ತುಂಬಾ ಪ್ರೀತಿ. ಹೀಗಾಗಿ ಅವರು ತಮ್ಮ ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿದ್ದರು. ಆ ನಾಯಿಗಳಿಗೆ ತಮ್ಮ ಜನಪ್ರಿಯ ಸಿನಿಮಾ ಡೈಲಾಗ್‍ಗಳಾದ ‘ಕನ್ವರ್ ಲಾಲ್’ ಮತ್ತು ‘ಬುಲ್ ಬುಲ್’ ಎಂದು ಹೆಸರಿಟ್ಟಿದ್ದರು. ಈ ಮೂಲಕ ಪ್ರತಿದಿನ ತಮ್ಮ ಡೈಲಾಗ್‍ಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಅಂಬರೀಶ್ ಅವರು ಸಮಯ ಸಿಕ್ಕಾಗಲೆಲ್ಲಾ ಕನ್ವರ್ ಲಾಲ್ ಮತ್ತು ಬುಲ್ ಬುಲ್ ಜೊತೆಗೆ ಕಾಲಕಳೆಯುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top