fbpx
ಸಮಾಚಾರ

ಗಗನ ಸಖಿಯಾಗಿ ಹೊಸ ಜರ್ನಿ ಆರಂಭಿಸಿದ ನಿವೇದಿತಾ ಗೌಡ: ಕಿರುತೆರೆಗೆ ಗುಡ್‌ ಬೈ

ಬಿಗ್ ಬಾಸ್ ಸೀಸನ್‌-5ರ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಿತವಾಗಿ ಜನಪ್ರಿಯರಾದ ನಿವೇದಿತಾ ಗೌಡ ಮುಂದಿನ ತಿಂಗಳು ಚಂದನ್ ಶೇಟ್ಟಿ ಜೊತೆ ಸಾಂಸಾರಿಕ ಜೀವನಕ್ಕೇ ಕಾಲಿಡುತ್ತಿದ್ದಾರೆ. ಈ ಮದ್ಯೆ ನಿವೇದಿತಾ ಗೌಡ ಅವರು ಕಿರುತೆರೆ ಬಣ್ಣದ ಬದುಕಿಗೆ ವಿದಾಯ ಹೇಳಿದ್ದು ಗಗನ ಸಖಿಯಾಗಿ ಹೊಸ ಜರ್ನಿ ಆರಂಭಿಸಿದ್ದಾರೆ.

 

View this post on Instagram

Finally ✈️❤️

A post shared by Niveditha Gowda 👑 (@niveditha__gowda) on

 

BCA ಪದವಿ ಪಡೆದ ನಂತರ ಕೆಲ ದಿನಗಳ ಕಾಲ ‘ಕಾಮಿಡಿ ಕಂಪನಿ’ ರಿಯಾಲಿಟಿ ಶೋನಲ್ಲಿ ಜಡ್ಜ್‌ ಆಗಿ ಕಾಣಿಸಿಕೊಂಡ ನಿವೇದಿತಾ, ಬಳಿಕ ಗಗನ ಸಖಿಯಾಗಲು ತರಬೇತಿ ಪಡೆಯುತ್ತಿದ್ದರು. ಈಗ ಬೆಂಗಳೂರು ಏರ್‌ಪೋರ್ಟ್‌ನ ಪ್ರತಿಷ್ಠಿತ ಕಂಪನಿಯಲ್ಲಿ ಅಪರೇಷನ್‌ ಅಸಿಸ್ಟೆಂಟ್‌ ಅಗಿ ವೃತ್ತಿ ಆರಂಭಿಸಿದ್ದಾರೆ. ಏರ್ಪೋರ್ಟ್‌ನಲ್ಲಿ ಕೆಲಸ ಮಾಡಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ನಿವೇದಿತಾ ಇನ್‌ಸ್ಟಾಗ್ರಾಂನಲ್ಲಿ ಬಹಿರಂಗ ಪಡಿಸಿದ್ದಾರೆ.

ಅಂದಹಾಗೆ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಫ್ರೆಬವರಿ 25-26ರಂದು ಗುರು-ಹಿರಿಯರ ಸಮ್ಮುಖದಲ್ಲಿ ಮೈಸೂರಿನ ಕನ್ವೆನ್ಷನ್ ಹಾಳ್ ನಲ್ಲಿ ವಿವಾಹ ಮಾಡಿಕೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top