fbpx
ಸಮಾಚಾರ

ಕನ್ನಡಿಗ ಮಾಯಾಂಕ್ ಅಗರ್ವಾಲ್ ಗೆ ಪ್ರತಿಷ್ಠಿತ ಪ್ರಶಸ್ತಿ!

ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಮಿಂಚುತ್ತಿರುವ ಟೀಂ ಇಂಡಿಯಾ ಟೆಸ್ಟ್ ಓಪನರ್ ಹೆಮ್ಮೆಯ ಕನ್ನಡಿಗ ಮಾಯಾಂಕ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದೆ. 2018-19 ವರ್ಷದ ಬಿಸಿಸಿಐ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, ಶ್ರೇಷ್ಠ ಅಂತಾರಾಷ್ಟ್ರೀಯ ಡೆಬ್ಯು ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿರುವ ಮಾಯಾಂಕ್ ಅಗರ್ವಾಲ್ ಇಲ್ಲಿಯವರೆಗೂ ಆಡಿರುವುದು ಕೇವಲ 9 ಪಂದ್ಯ ಆಗಿದ್ದರೂ ರನ್ ಗಳಿಕೆಯಲ್ಲಿ ಮಿಂಚೂಣಿಯಲ್ಲಿದ್ದಾರೆ. 67.08ರ ಸರಾಸರಿಯಲ್ಲಿ 872ರನ್ನುಗಳನ್ನ ಮಾಯಾಂಕ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಮತ್ತು ಎರಡು ಅರ್ಧಶತಕ ಒಳಗೊಂಡಿವೆ. ವೆಸ್ಟ್ ಇಂಡೀಸ್ ವಿರುದ್ಧ ಬಾರಿಸಿದ 243 ಅವರ ಅತುತ್ತಮ ಪ್ರದರ್ಶನವಾಗಿದೆ. ಅಲ್ಪಾವಧಿಯಲ್ಲಿಯೇ adbuta ಪ್ರದರ್ಶನ ನೀಡುತ್ತಿರುವುದನ್ನು ಗಮನಿಸಿಯೇ ಬಿಸಿಸಿಐ ಶ್ರೇಷ್ಠ ಅಂತಾರಾಷ್ಟ್ರೀಯ ಡೆಬ್ಯು ಎಂಬ ಪ್ರಶಸ್ತಿ ನೀಡಿದೆ.

ಬಿಸಿಸಿಐ ಪ್ರಶಸ್ತಿ ಪುರಸ್ಕೃತರು: 2018-19
1. ಕರ್ನಲ್‌ ಸಿ.ಕೆ. ನಾಯ್ಡು ಪ್ರಶಸ್ತಿ, ಜೀವಮಾನದ ಸಾಧನೆ: ಕೆ. ಶ್ರೀಕಾಂತ್‌
2. ಬಿಸಿಸಿಐ ಜೀವಮಾನದ ಸಾಧನೆ: ಅಂಜುಮ್‌ ಚೋಪ್ರಾ
3. ಬಿಸಿಸಿಐ ವಿಶೇಷ ಪ್ರಶಸ್ತಿ: ದಿಲೀಪ್‌ ದೋಶಿ
4. ದಿಲೀಪ್‌ ಸರ್ದೇಸಾಯಿ ಪ್ರಶಸ್ತಿ (ಅತ್ಯಧಿಕ ಟೆಸ್ಟ್‌ ರನ್‌): ಚೇತೇಶ್ವರ್‌ ಪೂಜಾರ

5. ದಿಲೀಪ್‌ ಸರ್ದೇಸಾಯಿ ಪ್ರಶಸ್ತಿ (ಅತ್ಯಧಿಕ ಟೆಸ್ಟ್‌ ವಿಕೆಟ್‌): ಜಸ್‌ಪ್ರೀತ್‌ ಬುಮ್ರಾ
6. ಏಕದಿನದ ಬ್ಯಾಟಿಂಗ್‌ ಸಾಧಕಿ: ಸ್ಮತಿ ಮಂಧನಾ
7. ಏಕದಿನದ ಬೌಲಿಂಗ್‌ ಸಾಧಕಿ: ಜೂಲನ್‌ ಗೋಸ್ವಾಮಿ
8. ಪಾಲಿ ಉಮ್ರಿಗರ್‌ ಪ್ರಶಸ್ತಿ (ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗ): ಜಸ್‌ಪ್ರೀತ್‌ ಬುಮ್ರಾ
9. ಶ್ರೇಷ್ಠ ಅಂತಾರಾಷ್ಟ್ರೀಯ ಆಟಗಾರ್ತಿ: ಪೂನಂ ಯಾದವ್‌

10. ಶ್ರೇಷ್ಠ ಅಂತಾರಾಷ್ಟ್ರೀಯ ಡೆಬ್ಯು: ಮಾಯಾಂಕ್‌ ಅಗರ್ವಾಲ್‌
11. ಶ್ರೇಷ್ಠ ಅಂತಾರಾಷ್ಟ್ರೀಯ ಡೆಬ್ಯು: ಶಫಾಲಿ ವರ್ಮ
12. ಲಾಲಾ ಅಮರನಾಥ್‌ ಪ್ರಶಸ್ತಿ (ಶ್ರೇಷ್ಠ ರಣಜಿ ಆಲ್‌ರೌಂಡರ್‌): ಶಿವಂ ದುಬೆ
13. ಲಾಲಾ ಅಮರನಾಥ್‌ ಪ್ರಶಸ್ತಿ (ದೇಶಿ ಏಕದಿನದ ಶ್ರೇಷ್ಠ ಆಲ್‌ರೌಂಡರ್‌): ನಿತೀಶ್‌ ರಾಣಾ

14. ಮಾಧವ ರಾವ್‌ ಸಿಂಧಿಯಾ ಪ್ರಶಸ್ತಿ (ರಣಜಿಯಲ್ಲಿ ಅತ್ಯಧಿಕ ರನ್‌): ಮಿಲಿಂದ್‌ ಕುಮಾರ್‌
15. ಮಾಧವ ರಾವ್‌ ಸಿಂಧಿಯಾ ಪ್ರಶಸ್ತಿ (ರಣಜಿಯಲ್ಲಿ ಅತ್ಯಧಿಕ ವಿಕೆಟ್‌): ಅಶುತೋಷ್‌ ಅಮಾನ್‌
16. ದೇಶಿ ಕ್ರಿಕೆಟಿನ ಶ್ರೇಷ್ಠ ಅಂಪಾಯರ್‌: ವೀರೇಂದರ್‌ ಶರ್ಮ
17. ದೇಶಿ ಕ್ರಿಕೆಟಿನ ಶ್ರೇಷ್ಠ ತಂಡ: ವಿದರ್ಭ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top