fbpx
ಸಮಾಚಾರ

ಮಾಡಿದ ಎಡವಟ್ಟಿಗೆ ಸಂಕಷ್ಟದಲ್ಲಿ ಸಿಲುಕಿದ ನಟಿ ಸಂಜನಾ!

ಸ್ಯಾಂಡಲ್​ವುಡ್ ನಟಿ ಸಂಜನಾ ಗಲ್ರಾಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ನಿರ್ಮಾಪಕಿ ವಂದನಾ ಅವರೊಂದಿಗಿನ ಜಟಾಪಟಿಯಿಂದ ಸುದ್ದಿಯಾಗಿದ್ದ ಸಂಜನಾ ಈ ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಂಜನಾ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ತೆಲುಗಿನ ‘ಸರಿಲೇರು ನೀಕೆವ್ವರು’ ಸಿನಿಮಾ ನೋಡಲು ತೆರಳುತ್ತಿರುವ ಉತ್ಸಾಹದಲ್ಲಿದ್ದ ಅವರು, ಆ ವಿಷಯವನ್ನು ಅಭಿಮಾನಿಗಳಿಗೆ ತಿಳಿಸುವ ಸಲುವಾಗಿ ಒಂದು ಸೆಲ್ಫಿ ವಿಡಿಯೋ ಮಾಡಿದ್ದಾರೆ. ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಈ ರೀತಿ ವರ್ತನೆ ಮಾಡಿರುವುದೇ ಈಗ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ಮೆಜಸ್ಟಿಕ್ ರಸ್ತೆಯಲ್ಲಿ ಕಾರು ಚಾಲನೆ ಮಾಡುವ ವೇಳೆ ಸೆಲ್ಪೀ ವಿಡಿಯೋ ಮಾಡಿದ್ದರು. ತೆಲುಗು ನಟ ಮಹೇಶ್ ಬಾಬು ಮೂವಿ ವೀಕ್ಷಣೆಗೆ ತೆರಳುತ್ತಿದಾಗ ತಿಳಿಸಿರುವ ಈ ವಿಡಿಯೋದಲ್ಲಿ ಸಖತ್ ಜೋಷನಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಸಂಚಾರಿ ನಿಯಮದ ಪ್ರಕಾರ, ವಾಹನ ಚಲಾಯಿಸುವ ವೇಳೆ ಮೊಬೈಲ್ ಫೋನ್ ಬಳಸುವ ಹಾಗಿಲ್ಲ. ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಭಾರಿ ದಂಡ ತೆರಬೇಕಾಗುತ್ತದೆ. ಮೊಬೈಲ್ ಬಳಕೆಯಿಂದ ಮೂರು ಬಾರಿ ಸಿಕ್ಕಿಬಿದ್ದರೆ, ಡ್ರೈವಿಂಗ್ ಲೈಸೆನ್ಸ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸ್ಸು ಮಾಡುತ್ತಾರೆ.

ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದ ನಟಿ ಸಂಜನಾ ಮತ್ತು ಆಕೆಯ ಜೊತೆ ಕಾರಿನಲ್ಲಿದ್ದ ವ್ಯಕ್ತಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಸಂಜನಾ ಅವರ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಸಂಚಾರಿ ಪೊಲೀಸರು ನಟಿಗೆ ನೊಟೀಸ್ ಜಾರಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸಂಜನಾ ಮಾಡಿರುವುದು ಸ್ಪಷ್ಟ ಕಾನೂನು ಉಲ್ಲಂಘಟನೆ. ಹೀಗಾಗಿ ಸಂಚಾರಿ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರ ಸೂಚನೆ ಮೇರೆಗೆ ಮೇರೆಗೆ ನಟಿ ಸಂಜನಾ ಅವರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಈ ಸಂಬಂಧ ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top