fbpx
ಸಮಾಚಾರ

ವಿಶ್ವಕಪ್ ವೇಳೆ ಸುದ್ದಿಯಾಗಿದ್ದ ಟೀಂ ಇಂಡಿಯಾ ಸೂಪರ್ ಫ್ಯಾನ್ ಚಾರುಲತಾ ಪಟೇಲ್ ವಿಧಿವಶ!

ಕಳೆದ ವರ್ಷ ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ವೇಳೆ ಇಳಿ ವಯಸ್ಸಿನಲ್ಲೂ ತುತ್ತೂರಿ ಊದುತ್ತಾ ಭಾರತ ತಂಡದ ಆಟಗಾರರನ್ನು ಹುರಿದುಂಬಿಸಿ ಕ್ರಿಕೆಟ್‌ ಅಭಿಮಾನಿಗಳ ಮನ ಗೆದ್ದಿದ್ದ, ಟೀಮ್‌ ಇಂಡಿಯಾದ ಸೂಪರ್‌ ಫ್ಯಾನ್‌ ಚಾರುಲತಾ ಪಟೇಲ್‌ (87) ಅಜ್ಜಿ ಇಹಲೋಕ ತ್ಯಜಿಸಿದ್ದಾರೆ. 87 ವರ್ಷ ವಯಸ್ಸಾಗಿದ್ದ ಚಾರುಲತಾ ಪಟೇಲ್, ಜನವರಿ 13ರಂದು 5.30 pm ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

 

 

ಪಟೇಲ್ ನಿಧನಕ್ಕೆ ಬಿಸಿಸಿಐ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದೆ.'”ಟೀಮ್ ಇಂಡಿಯಾ ಸೂಪರ್ ಫ್ಯಾನ್ ಚಾರುಲತಾ ಪಟೇಲ್ ಜೀ ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಉಳಿಯಲಿದ್ದಾರೆ. ಈ ವಯಸ್ಸಿನಲ್ಲೂ ಅವರು ತಂಡದ ಮೇಲಿದ್ದ ಅಭಿಮಾನ ಎಲ್ಲರಿಗೂ ಪ್ರೇರಣೆ ನೀಡಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಬಿಸಿಸಿಐ ಟ್ವಿಟ್ ಮಾಡಿದೆ.

ವಿಶ್ವಕಪ್‍ನ ಭಾರತ ಮತ್ತು ಬಾಂಗ್ಲಾದೇಶ ಮ್ಯಾಚ್ ವೇಳೆ ಸ್ಟೇಡಿಯಂನಲ್ಲಿ ಚಾರುಲತಾ ಅವರು ಎಲ್ಲರ ಗಮನ ಸೆಳೆದಿದ್ದರು. ಇಳಿ ವಯಸ್ಸಿನಲ್ಲೂ ಟೀಂ ಇಂಡಿಯಾಗೆ ಅವರು ಪ್ರೋತ್ಸಾಹಿಸಿದ ಪರಿಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದರು. ಕೇವಲ ಅಭಿಮಾನಿಗಳು ಮಾತ್ರವಲ್ಲ ಟೀ ಇಂಡಿಯಾ ನಾಯಕ ವಿರಾಟ್ ಕೋಹ್ಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡ ಚಾರುಲತಾ ಅವರ ಪ್ರೀತಿ ಪ್ರೋತ್ಸಾಹಕ್ಕೆ ಮನಸೋತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top