fbpx
ಸಮಾಚಾರ

ಕುಣಿದವರು ಶಿಕ್ಷಕಿಯರಲ್ಲ: NGO ಮಹಿಳೆಯವರಿಗೆ ಇಂಥಾ ಚಟುವಟಿಕೆಗೆ ಅವಕಾಶ ಕೊಟ್ಟಿದ್ಯಾರು?

ಸರಕಾರಿ ಶಾಲೆಯ ವೇದಿಕೆಯಲ್ಲಿಸಿನಿಮಾ ಹಾಡೊಂದಕ್ಕೆ ಮಹಿಳೆಯರು ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ! ಈ ನೃತ್ಯವನ್ನು ಮಾಡಿರುವುದು ಶಾಲಾ ಶಿಕ್ಷಕಿಯರು ಎಂದು ನೆಟ್ಟಿಗರು ಭಾವಿಸಿ ಟೀಕೆಗೆ ಗುರಿಮಾಡುತ್ತಿದ್ದಾರೆ! ಆದರೆ ಅಸಲಿ ವಿಚಾರವೇ ಬೇರೆ ಇದೆ, ಏನದು ಅಂತೀರಾ? ಮುಂದೆ ಓದಿ!

 

 

ಮಾಹಿತಿ ಪ್ರಕಾರ ಶಾಲೆಗೆ ದಾನ ಮಾಡಿದ ಸ್ಪೂರ್ತಿ ಮಹಿಳಾ ಸಂಘದ ಸದಸ್ಯೆಯರು ಕಾರ್ಯಕ್ರಮ ಮುಗಿದ ನಂತರ ಹೀಗೆ ನೃತ್ಯ ಮಾಡಿದ್ದಾರೆ. ಇದರಲ್ಲಿ ಶಾಲೆಯ ಶಿಕ್ಷಕಿಯರು ಪಾಲ್ಗೊಂಡಿರಲಿಲ್ಲ ಎನ್ನಲಾಗಿದೆ. ಆದ್ರೆ ಇಲ್ಲಿ ಡ್ಯಾನ್ಸ್​ ಮಾಡಿದ್ದು ಯಾರು..? ಎನ್​ಜಿಓ ಸಂಸ್ಥೆಯಾದ್ರೂ ಶಾಲೆಯಲ್ಲಿ ಇಂಥಾ ಚಟುವಟಿಕೆಗೆ ಅವಕಾಶ ಕೊಟ್ಟಿದ್ಯಾಕೆ ಅನ್ನೋದ್ರ ಬಗ್ಗೆ ತನಿಖೆಯಿಂದಲೇ ಹೊರಬರಬೇಕಿದೆ.

ಆ ಕಾಮೆಂಟ್ ನೋಡಿ, ವಿಡಿಯೋ ನೋಡಿದ ಸುರೇಶ್ ಕುಮಾರ್ ಈ ರೀತಿ ಸಭ್ಯವಲ್ಲದ ಸಾಂಗ್‍ಗಳಿಗೆ ಶಿಕ್ಷಕರು ಡ್ಯಾನ್ಸ್ ಮಾಡಿದ್ದು ಸರಿಯಲ್ಲ ಅಂತಾ ಶಾಲೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದ್ರೆ ಸುರೇಶ್ ಕುಮಾರ್ ನೋಟಿಸ್ ಗೆ ಶಾಲೆ ಏನ್ ಉತ್ತರ ಕೊಡುತ್ತೆ? ಬಳಿಕ ಸುರೇಶ್ ಕುಮಾರ್ ಕ್ರಮ ಏನು ಅನ್ನೋದಂತೂ ಕುತೂಹಲ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top