fbpx
ಸಮಾಚಾರ

‘ಅಲ್ಲಾಡ್ಸು ಅಲ್ಲಾಡ್ಸು’ ಎಂದು ಸೊಂಟ ಬಳುಕಿಸಿದ ಶಿಕ್ಷಕಿಯರ ವಿರುದ್ಧ ಶಿಕ್ಷಣ ಸಚಿವ ಗರಂ!

ಸರಕಾರಿ ಶಾಲೆಯ ವೇದಿಕೆಯಲ್ಲಿ ಪದ್ಯವೊಂದಕ್ಕೆ ಶಿಕ್ಷಕಿಯರು ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದನ್ನು ‘ಅಸಭ್ಯ’ ನೃತ್ಯ ಎಂದು ಪರಿಗಣಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆಯಂತೆ ಶಾಲೆಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

 

 

ಬೆಂಗಳೂರಿನ ಹನುಮಂತನಗರದ ರಾಮಾಂಜನೇಯ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕಿಯರು ಫುಲ್ ಜೋಶ್‍ನಲ್ಲಿದ್ದರು. ಮಕ್ಕಳು ಇರಲಿ, ಶಿಕ್ಷಕರೇ ಇರಲಿ ಶಾಲಾ ಕಾರ್ಯಕ್ರಮದಲ್ಲಿ “ಅಲ್ಲಾಡ್ಸು ಅಲ್ಲಾಡ್ಸು” ಸಿನಿಮಾ ಹಾಡಿಗೆ ಟೀಚರ್ಸ್ ಕುಣಿದಿದ್ದೇ ಕುಣಿದಿದ್ದು. ಕೈಯಲ್ಲಿ ನೀರಿನ ಬಾಟಲಿ ಬೇರೆ ಹಿಡಿದುಕೊಂಡು ಅಲ್ಲಾಡ್ಸು ಅಲ್ಲಾಡ್ಸು ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ವೈರಲ್ ಆಗಿತ್ತು.

 

 

ಈ ಬಗ್ಗೆ ಫೇಸ್‌ಬುಕ್ ನಲ್ಲಿ ವಿಡಿಯೋ ಹಾಕಿರುವ ಸಚಿವ ಸುರೇಶ್ ಕುಮಾರ್, ‘ಶಾಲೆಯ ಮುಖ್ಯೋಪಾಧ್ಯಾಯರಿಗೆ ನೊಟೀಸ್ ಜಾರಿ ಮಾಡಲಾಗಿದ್ದು, ಅಸಭ್ಯವಾಗಿ ನರ್ತಿಸಿರುವ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ. “ಸಭ್ಯತೆಯಲ್ಲದ ಹಾಡಿಗೆ ಶಿಕ್ಷಕರು ಡ್ಯಾನ್ಸ್ ಮಾಡಿದ್ದು ಸರಿಯಲ್ಲ ಅಂತಾ ಶಾಲೆಗೆ ನೋಟಿಸ್ ಜಾರಿ ಮಾಡುತ್ತಿದ್ದೇನೆ” ಎಂದಿದ್ದಾರೆ.ಇನ್ನು ಸಚಿವರ ನೋಟೀಸ್ ಗೆ ಶಾಲೆಯಿಂದ ಯಾವ ಬಗೆಯ ಪ್ರತಿಕ್ರಿಯೆ ಬಂದಿಲ್ಲ.

ಇಂತಹಾ ಮುಜುಗರ ಘಟನೆಗಳು ಇನ್ನು ಮುಂದೆ ನಡೆಯದಿರಲಿ, ‘ಶಿಕ್ಷಕ’ ಸ್ಥಾನಕ್ಕೆ ಇರುವ ಘನತೆಯನ್ನು ಹೆಚ್ಚಿಸುವ ಕಾರ್ಯವನ್ನು ರಾಜ್ಯದ ಶಿಕ್ಷಕರು ಮಾಡಬೇಕೆಂದು ಸುರೇಶ್ ಕುಮಾರ್ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top