fbpx
ಸಮಾಚಾರ

ಮತ್ತೊಮ್ಮೆ ಕನ್ನಡ ಪ್ರೇಮ ಮೆರೆದು ಕನ್ನಡಿಗರ ಮನಗೆದ್ದ ನಟಿ ಅನುಷ್ಕಾ ಶೆಟ್ಟಿ!

ಟಾಲಿವುಡ್‍ನಲ್ಲಿ ಖ್ಯಾತಿ ನಟಿಯಾಗಿದ್ದರೂ ಅನುಷ್ಕಾ ಶೆಟ್ಟಿ ಅವರಿಗೆ ಕನ್ನಡದ ಮೇಲಿರುವ ಪ್ರೀತಿ ಕಿಂಚಿತ್ತು ಕಡಿಮೆಯಾಗಿಲ್ಲ. ಬೇರೆ ಭಾಷೆ ಸಿನಿಮಾಗಳಲ್ಲಿ ಚಾನ್ಸ್ ಸಿಕ್ಕ ಬಳಿಕ ಹಲವರು ಕನ್ನಡವನ್ನೇ ಮರೆತಂತೆ ಆಡುತ್ತಾರೆ. ಆದರೆ ಅನುಷ್ಕಾ ಶೆಟ್ಟಿ ಅವರು ಮಾತ್ರ ಅಭಿಮಾನಿಗಳಿಗೆ ಕನ್ನಡದಲ್ಲಿ ಸಂಕ್ರಾಂತಿ ಶುಭಾಶಯ ತಿಳಿಸಿ ಎಲ್ಲರ ಮನಗೆದ್ದಿದ್ದಾರೆ.

 

 

ಜ.15ರಂದು ಎಲ್ಲೆಲ್ಲೂ ಸಂಕ್ರಾಂತಿ ಸಂಭ್ರಮ. ದೇಶದ ವಿವಿಧ ಭಾಗಗಳಲ್ಲಿ ಆಚರಿಸಲ್ಪಡುವ ಈ ಹಬ್ಬಕ್ಕೆ ಬೇರೆ ಬೇರೆ ಹೆಸರುಗಳಿಂದಲೂ ಕರೆಯುತ್ತಾರೆ. ಆ ಎಲ್ಲ ಹೆಸರುಗಳಿರುವ ಒಂದು ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅನುಷ್ಕಾ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಅಪ್ಪಟ ಕನ್ನಡದಲ್ಲಿ ‘ಮಕರ ಸಂಕ್ರಾಂತಿ ಶುಭಾಶಯಗಳು’ ಎಂದು ಬರೆದು ಅವರು ವಿಶ್‌ ಮಾಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಅವರ ಕನ್ನಡ ಪ್ರೀತಿ ಕಂಡು ಕನ್ನಡಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

 

 

ಅಂದಹಾಗೆ ಈ ಹಿಂದೆ ಕನ್ನಡ ರಾಜ್ಯೋತ್ಸವಕ್ಕೆ ‘ಈ ದಿನ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವಲ್ಲಿ ಹೆಮ್ಮೆ ಪಡೋಣ ಮತ್ತು ವರ್ಷವಿಡೀ ಪ್ರತಿಯೊಂದೂ ಕ್ಷಣವನ್ನೂ ಹೀಗೆ ಮುಂದುವರಿಸೋಣ ಪ್ರಪಂಚದಾದ್ಯಂತ ಇರುವ ಎಲ್ಲಾ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು’ ಎಂದು ಬರೆದು ವಿಶ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top