fbpx
ಸಮಾಚಾರ

ಬಿಸಿಸಿಐ ಆಟಗಾರರ ಒಪ್ಪಂದದ ಪಟ್ಟಿಯಿಂದ ಧೋನಿ ಔಟ್: ಮುಗಿಯಿತೇ ಕ್ರಿಕೆಟ್ ಬದುಕು?

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ 2019-20ರ ಸಾಲಿನಲ್ಲಿ ವಾರ್ಷಿಕ ಒಪ್ಪಂದ ಪಡೆದಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಾಜಿ ನಾಯಕ ಎಂಎಸ್‌ ಧೋನಿ ಅವರನ್ನು ಒಪ್ಪಂದದಿಂದ ಕೈಬಿಟ್ಟಿದೆ. ಧೋನಿ ಅಷ್ಟೇ ಅಲ್ಲದೆ ದಿನೇಶ್ ಕಾರ್ತಿಕ್, ಅಂಬಟಿ ರಾಯುಡು ಮತ್ತು ಖಲೀಲ್ ಅಹ್ಮದ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.

ಕಳೆದ ವರ್ಷ ಎ ಗ್ರೇಡ್‍ನಲ್ಲಿದ್ದ ಧೋನಿ ಅವರು ಯಾವುದೇ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಬಿಸಿಸಿಐ ಪ್ರಸ್ತುತ 27 ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಉನ್ನತ ದರ್ಜೆಯ ‘ಎ ಪ್ಲಸ್’ ನೀಡಲಾಗಿದೆ. ಈ ಮೂವರೂ ಆಟಗಾರರು ಕಳೆದ ವರ್ಷವೂ ಇದೇ ದರ್ಜೆಯಲ್ಲಿದ್ದರು.

2014ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಧೋನಿ, 2017ರಲ್ಲಿ ಚುಟುಕು ಕ್ರಿಕೆಟ್‌ ನಾಯಕತ್ವ ತೊರೆದಿದ್ದರು. ಮಾತ್ರವಲ್ಲದೆ ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲು ಕಂಡ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಆದರೆ, ಕ್ರಿಕೆಟ್‌ನಲ್ಲಿ ಮುಂದುವರಿಯುವ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಅವರನ್ನು ಪಟ್ಟಿಯಿಂದ ತೆಗೆಯಲಾಗಿದೆ. ಇದರೊಂದಿಗೆ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಬಗ್ಗೆ ಮತ್ತಷ್ಟು ಅನುಮಾನಗಳು ಮೂಡಿವೆ.

ಸದ್ಯ ಪ್ರಕಟವಾಗಿರುವ 27 ಆಟಗಾರರಿರುವ 2019–2020ರ ಪಟ್ಟಿ ಹೀಗಿದೆ.
‘ಎ+’ ಶ್ರೇಣಿ: ವಾರ್ಷಿಕ ₹ 7 ಕೋಟಿ
01. ವಿರಾಟ್‌ ಕೊಹ್ಲಿ
02. ರೋಹಿತ್‌ ಶರ್ಮಾ
03. ಜಸ್‌ಪ್ರಿತ್‌ ಬೂಮ್ರಾ

‘ಎ’ ಶ್ರೇಣಿ: ವಾರ್ಷಿಕ ₹ 5 ಕೋಟಿ
01. ರವಿಚಂದ್ರನ್‌ ಅಶ್ವಿನ್‌
02. ರವೀಂದ್ರ ಜಡೇಜಾ
03. ಭುವನೇಶ್ವರ್ ಕುಮಾರ್‌
04. ಚೇತೇಶ್ವರ ಪೂಜಾರ
05. ಅಜಿಂಕ್ಯ ರಹಾನೆ

06. ಕೆ.ಎಲ್‌.ರಾಹುಲ್‌
07. ಶಿಖರ್‌ ಧವನ್‌
08. ಮೊಹಮದ್ ಶಮಿ
09. ಇಶಾಂತ್‌ ಶರ್ಮಾ
10. ಕುಲದೀಪ್‌ ಯಾದವ್‌
11. ರಿಷಭ್‌ ಪಂತ್

‘ಬಿ’ ಶ್ರೇಣಿ: ವಾರ್ಷಿಕ ₹ 3 ಕೋಟಿ
01. ವೃದ್ದಿಮಾನ್‌ ಸಹಾ
02. ಉಮೇಶ್‌ ಯಾದವ್‌
03. ಯಜುವೇಂದ್ರ ಚಾಹಲ್‌
04. ಹಾರ್ದಿಕ್ ಪಾಂಡ್ಯ
05. ಮಯಂಕ್‌ ಅಗರವಾಲ್‌

‘ಸಿ’ ಶ್ರೇಣಿ: ವಾರ್ಷಿಕ ₹ 1 ಕೋಟಿ
01. ಕೇದಾರ್‌ ಜಾಧವ್‌
02. ನವದೀಪ್ ಶೈನಿ
03. ದೀಪಕ್‌ ಚಾಹರ್‌
04. ಮನೀಷ್‌ ಪಾಂಡೆ

05. ಹನುಮ ವಿಹಾರಿ
06. ಶಾರ್ದೂಲ್‌ ಠಾಕೂರ್‌
07. ಶ್ರೇಯಸ್‌ ಅಯ್ಯರ್
08. ವಾಷಿಂಗ್ಟನ್‌ ಸುಂದರ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top