fbpx
ಸಮಾಚಾರ

ಚೈತ್ರ ಕೋಟೂರುಗೆ ಬಿಗ್ ಆಫರ್ ಕೊಟ್ರು ರವಿ ಬೆಳಗೆರೆ: ಏನದು ಗೊತ್ತಾ?

‘ಬಿಗ್ ಬಾಸ್ ಕನ್ನಡ-7’ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಹೋಗಿ ಅನಾರೋಗ್ಯ ಕಾರಣಗಳಿಂದ ವಿಶೇಷ ಅತಿಥಿಯಾಗಿ ಬದಲಾಗಿ ಕೊನೆಗೆ ಒಂದೇ ವಾರಕ್ಕೆ ವಾಪಸ್ಸು ಬಂದಿದ್ದರು ಪತ್ರಕರ್ತ ರವಿ ಬೆಳಗೆರೆ! ಇದ್ದ ಒಂದೇ ವಾರದಲ್ಲಿ ‘ಬಿಗ್ ಬಾಸ್’ ಮನೆಯೊಳಗೆ ರವಿ ಬೆಳಗೆರೆ ಜೊತೆಗೆ ಚೈತ್ರ ಕೋಟೂರು ಸೇರಿದಂತೆ ಇತರೆ ಸ್ಪರ್ಧಿಗಳು ಉತ್ತಮ ಒಡನಾಟ ಹೊಂದಿದ್ದರು.

ಇನ್ನು ‘ಬಿಗ್ ಬಾಸ್’ ಮನೆಯಿಂದ ಚೈತ್ರ ಕೋಟೂರು ಎಲಿಮಿನೇಟ್ ಆಗಿ ಹೊರ ಬಂದಮೇಲೆ ರವಿ ಬೆಳಗೆರೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಸೆಲ್ಫಿಯನ್ನು ತೆಗೆದುಕೊಂಡು ಖುಷಿ ಪಟ್ಟಿದ್ದಾರೆ. ಇದೆ ವೇಳೆ ಚೈತ್ರ ಕೋಟೂರುಗೆ ರವಿ ಬೆಳಗೆರೆ ದೊಡ್ಡ ಆಫರ್ ನೀಡಿದ್ದಾರೆ.

ನಟನೆ ಜೊತೆಗೆ ಬರಹಗಾರ್ತಿ ಕೂಡ ಆಗಿರುವ ಚೈತ್ರ ಕೋಟೂರು ಅವ್ರಿಗೆ ರವಿ ಬೆಳಗೆರೆ ಒಂದು ಆಫರ್ ನೀಡಿದ್ದಾರಂತೆ. ಅದೇನೆಂದ್ರೆ ರವಿ ಬೆಳಗೆರೆ ಬರೆದಿರುವ ಒಂದು ಕೃತಿಯನ್ನು ಸಿನಿಮಾ ಅಥವಾ ಧಾರಾವಾಹಿ ಮಾಡುವ ಪ್ಲಾನ್ ನಡೆಯುತ್ತಿದೆ. ಈ ಪ್ರಾಜೆಕ್ಟ್ ನಲ್ಲಿ ಭಾಗಿಯಾಗುವಂತೆ ಚೈತ್ರ ಕೋಟೂರುಗೆ ರವಿ ಬೆಳಗೆರೆ ಅವಕಾಶ ನೀಡಿದ್ದಾರೆ. ಇನ್ನು ಧಾರಾವಾಹಿ ಅಥವಾ ಸಿನಿಮಾ ಆಗುತ್ತಿರುವ ರವಿ ಬೆಳಗೆರೆ ಅವರ ಕೃತಿ ಯಾವುದು? ಎಂಬುದರ ವಿವರ ಇನ್ನೂ ಲಭ್ಯವಾಗಿಲ್ಲ. ಆದ್ರೆ, ಆ ಆಫರ್ ಗೆ ಚೈತ್ರ ಕೋಟೂರು ಒಪ್ಪಿಗೆ ಸೂಚಿಸಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top