fbpx
ಸಮಾಚಾರ

ರಾಯಚೂರಿನಲ್ಲಿ ಶುರುವಾಯ್ತು ‘ಶ್ರೀಮತಿ ಸನ್ನಿ ಲಿಯೋನ್’ ಅಭಿಮಾನಿಗಳ ಸಂಘ!

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಹೆಸರಿನ ಯುವಕ ಮಂಡಳಿಯೊಂದು ರಾಜ್ಯದ ಹಳ್ಳಿಯೊಂದರಲ್ಲಿ ಸ್ಥಾಪನೆಯಾಗಿದ್ದು ಎಲ್ಲರ ಗಮನ ಸೆಳೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹುಡಾ ಗ್ರಾಮದ ಯುವಕರು ‘ಸನ್ನಿ ಲಿಯೋನ್‌ ಯುವಕ ಮಂಡಳಿ’ ರಚನೆ ಮಾಡುವ ಮೂಲಕ ಹಲವರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಅಂಬಾದೇವಿಯ ರಥೋತ್ಸವ ಹಾಗೂ ಕುಂಭೋತ್ಸವ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಅವರ ಅಭಿಮಾನಿಗಳ ಈ ಬ್ಯಾನರ್ ಭಾರೀ ಸದ್ದು ಮಾಡಿದೆ. ಬ್ಯಾನರ್ ನಲ್ಲಿ 13 ಯುವಕರು ಪಂಚೆ ಕಟ್ಟಿಕೊಂಡು ಸಾಲಾಗಿ ನಿಂತ ಬೃಹತ್ ಬ್ಯಾನರ್‌ವೊಂದನ್ನು ಕಟ್ಟಿ ತಾವು ಸನ್ನಿ ಲಿಯೋನ್ ಅವರ ಅಭಿಮಾನಿಗಳೆಂದು ಸಾರಿದ್ದಾರೆ. ನಟಿ ಸನ್ನಿ ಲಿಯೋನ್ ಕೆಂಪು ಸೀರೆ ಧರಿಸಿ ನಿಂತಿರುವ ಚಿತ್ರವನ್ನು ಯುವ ಪದಾಧಿಕಾರಿಗಳ ಪಕ್ಕದಲ್ಲಿ ದೊಡ್ಡದಾಗಿ ಹಾಕಲಾಗಿದೆ. ‘ಶ್ರೀಮತಿ ಸನ್ನಿಲಿಯೋನ್’ ಅಂತ ಗೌರವ ಸೂಚಕ ಪದ ಬಳಿಸಿ ಸಂಘಕ್ಕೆ ನಾಮಕರಣ ಮಾಡಿಕೊಂಡಿದ್ದಾರೆ. ನಟಿಯ ಸಭ್ಯ ಚಿತ್ರವನ್ನೇ ಬಳಸಿಕೊಂಡಿರುವುದು ವಿಶೇಷ.

” ಶ್ರೀ ಶ್ರೀ ಶ್ರೀ ಸಿದ್ಧಪರ್ವತ ಅಂಬಾದೇವಿಯ ರಥೋತ್ಸವ ಹಾಗೂ ಕುಂಭೋತ್ಸವಕ್ಕೆ ಸರ್ವರಿಗೂ ಆದರದ ಸುಸ್ವಾಗತ. ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ ಹುಡಾ” ಎಂದು ಬ್ಯಾನರ್ ಮೇಲೆ ಬರೆಸಲಾಗಿದ್ದು ಈ ಫ್ಲೆಕ್ಸ್ ಈಗ ಗ್ರಾಮದಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿದೆ.

ನೆರೆ ಸಂತ್ರಸ್ತರಿಗೆ 5 ಕೋಟಿ ನೆರವು ನೀಡಿ, ಅನಾಥಾಶ್ರಮವೊಂದನ್ನು ನಿರ್ವಹಿಸುತ್ತಿದ್ದಾರೆ. ಎನ್‌ಜಿಓ ಮೂಲಕ ಸಮಾಜ ಸುಧಾರಣೆ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ನಮಗೆ ಸಾಮಾಜಿಕ ಚಟುವಟಿಕೆಗಳಿಗೆ ಸ್ಪೂರ್ತಿ ಎನ್ನುವುದು ಅಭಿಮಾನಿಗಳ ಬಳಗದ ಸದಸ್ಯರ ವಾದವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top