fbpx
ಸಮಾಚಾರ

“ರಾಜೀವ್ ಹಂತಕರನ್ನು ಸೋನಿಯಾ ಕ್ಷಮಿಸಿದಂತೆ, ನಿರ್ಭಯಾ ಅಪರಾಧಿಗಳನ್ನು ಕ್ಷಮಿಸಿಬಿಡಿ” ವಕೀಲೆ ಇಂದಿರಾ ಜೈಸಿಂಗ್ ಹೇಳಿಕೆಗೆ ವ್ಯಾಪಕ ಟೀಕೆ

ತಮ್ಮ ಮಗಳನ್ನು ಅತ್ಯಾಚಾರವೆಸಗಿ ಸಾವಿಗೆ ಕಾರಣರಾದ ಅಪರಾಧಿಗಳನ್ನು ಕ್ಷಮಿಸುವಂತೆ ನಿರ್ಭಯಾ ತಾಯಿ ಆಶಾ ದೇವಿಗೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿರುವುದು ವ್ಯಾಪಕ ಟೀಕೆ ಮತ್ತು ಸುದ್ದಿಗೆ ಗ್ರಾಸವಾಗಿದೆ. ಅಪರಾಧಿಗಳನ್ನು ಗಲ್ಲಿಗೇರಿಸುವ ವಿಚಾರದಲ್ಲಿ ಆಗುತ್ತಿರುವ ವಿಳಂಬ ಕುರಿತು ಸುದ್ದಿಸಂಸ್ಥೆಗಳಿಗೆ ತಮ್ಮ ಬೇಸರ ವ್ಯಕ್ತಪಡಿಸಿದ ಆಶಾ ದೇವಿಯ ಕುರಿತು ಅಡ್ವೊಕೇಟ್ ಜೈಸಿಂಗ್ ಹೀಗೆ ಹೇಳಿದ್ದಾರೆ.

 

 

ನಿರ್ಭಯಾ ಪ್ರಕರಣದ ಬಗ್ಗೆ ಶುಕ್ರವಾರ ಟ್ವೀಟ್‌ ಮಾಡಿದ್ದ ಇಂದಿರಾ ಜೈಸಿಂಗ್‌ “ನನಗೆ ಆಶಾ ದೇವಿಯ ನೋವು ಅರ್ಥವಾಗುತ್ತದೆ, ಹೀಗಿದ್ದೂ ಸೋನಿಯಾ ಗಾಂಧಿ ಮಾದರಿಯನ್ನು ಅನುಸರಿಸುವಂತೆ ಅವರನ್ನು ಕೇಳಿಕೊಳ್ಳುತ್ತೇನೆ. ನಳಿನಿಯನ್ನು ಸೋನಿಯಾ ಗಾಂಧಿ ಕ್ಷಮಿಸಿದ್ದರು ಮತ್ತು ಆಕೆಗೆ ಗಲ್ಲು ಶಿಕ್ಷೆ ನೀಡುವುದನ್ನು ಅವರು ಬಯಸಿರಲಿಲ್ಲ. ನಾವು ನಿಮ್ಮೊಂದಿಗಿದ್ದೇವೆ, ಆದರೆ ಗಲ್ಲು ಶಿಕ್ಷೆಯ ವಿರುದ್ಧವಿದ್ದೇವೆ,” ಎಂಬುದಾಗಿ ಜೈಸಿಂಗ್‌ ಟ್ಟೀಟ್‌ ಮಾಡಿದ್ದರು.

ಜೈಸಿಂಗ್ ಅವರ ಟ್ವೀಟ್ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆಶಾ ದೇವಿ, ’‌ನನಗೆ ಸಲಹೆ ನೀಡಲು ಇಂದಿರಾ ಜೈಸಿಂಗ್‌ ಯಾರು? ಇಡೀ ದೇಶವೇ ನಿರ್ಭಯಾ ಪ್ರಕರಣದ ಅಪರಾಧಿಗಳು ನೇಣಿಗೆ ಏರಲಿ ಎಂದು ಬಯಸುತ್ತಿದೆ. ಇಂದಿರಾ ಜೈಸಿಂಗ್‌ರಂತಹ ಕೆಲ ಜನರಿಂದಲೇ ನ್ಯಾಯವು ವಿಳಂಬವಾಗುತ್ತಿದೆ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಳೆದ ಕೆಲ ವರ್ಷಗಳಲ್ಲಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರನ್ನು ಅನೇಕ ಬಾರಿ ಭೇಟಿ ಆಗಿದ್ದೇನೆ. ಆಗ ಅವರು ನನ್ನ ಸ್ಥಿತಿಗತಿಯ ಬಗ್ಗೆ ಒಂದು ಸಾರಿಯೂ ಕೇಳಲಿಲ್ಲ. ಈಗ ಮಾತ್ರ ಅಪರಾಧಿಗಳ ಪರ ಮಾತನಾಡುತ್ತಿದ್ದಾರೆ. ಅವರು ತಮ್ಮ ಹೊಟ್ಟೆಪಾಡಿಗಾಗಿ ಅತ್ಯಾಚಾರಿಗಳನ್ನು ಬೆಂಬಲಿಸುತ್ತಿದ್ದಾರೆ. ಇಂತವರಿಂದಲೇ ಅತ್ಯಾಚಾರಗಳು ಕಡಿಮೆ ಆಗುತ್ತಿಲ್ಲ‘ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top