fbpx
ಸಮಾಚಾರ

ಅಂಚೆ ಇಲಾಖೆ ನೇಮಕಾತಿ; ಕರ್ನಾಟಕದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ!

ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಂಡು ಆಸಕ್ತರು ಸಲ್ಲಿಸಲು 26/2/2020 ಕೊನೆಯ ದಿನವಾಗಿದೆ.

ಜ್ಯೂನಿಯರ್ ಅಕೌಂಟ್ (ಪೋಸ್ಟಲ್ ಅಕೌಂಟ್ ಆಫೀಸ್‌ಗಳಲ್ಲಿ) 2 ಹುದ್ದೆಗಳು. ಪೋಸ್ಟಲ್ ಅಸಿಸ್ಟೆಂಟ್ (ಪೋಸ್ಟ್ ಆಫೀಸ್ ಅಥವ ಆಡಳಿತ ಕೇಂದ್ರ) 11, ವಿಂಗಡಣೆ ಸಹಾಯಕ (ರೈಲ್ವೆ ಅಂಚೆ ಕಚೇರಿಗಳಲ್ಲಿ) 4, ಪೋಸ್ಟ್‌ಮನ್ (ಅಂಚೆ ಕಚೇರಿಗಳಲ್ಲಿ) 27 ಹುದ್ದೆಗಳನ್ನು ಭರ್ತಿ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ:
ಜ್ಯೂನಿಯರ್ ಅಕೌಂಟ್ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ಪಡೆದಿರಬೇಕು. ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ PUC, ವಿಂಗಡಣೆ ಸಹಾಯಕ ಹುದ್ದೆಗೆ PUC, ಪೋಸ್ಟ್ ಮನ್ PUC ಮತ್ತು ಕನ್ನಡ ಭಾಷೆ ಬರೆಯಲು, ಮಾತನಾಡಲು ಬರಬೇಕು. ಕನಿಷ್ಠ 10ನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಓದಿರಬೇಕು.

ವಯೋಮಿತಿ:
ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಹಾಗೂ ST/SC ಅಭ್ಯರ್ಥಿಗಳಿಗೆ 5, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಕ್ರೀಡಾ ಕೋಟಾದ ವಿವರ
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ 43 ಕ್ರೀಡೆಗಳಲ್ಲಿ ಯಾವುದೇ ಕ್ರೀಡೆಯಲ್ಲಾದರೂ ಸ್ಪರ್ಧಿಸಿರಬೇಕು (ಕ್ರೀಡೆಗಳಪಟ್ಟಿ ನೇಮಕಾತಿ ಅಧಿಸೂಚನೆಯಲ್ಲಿದೆ). ವಿಶ್ವವಿದ್ಯಾಲಯಗಳಿಂದ ಸ್ಪರ್ಧಿಸಿರಬೇಕು. ಆಲ್ ಇಂಡಿಯಾ ಸ್ಕೂಲ್ ಗೇಮ್ಸ್ ಸ್ಪರ್ಧೆಯಲ್ಲಿ ಶಾಲಾ-ಕಾಲೇಜುಗಳಿಂದ ಭಾಗವಹಿಸಿರಬೇಕು. ಅಗತ್ಯ ದಾಖಲೆ ಹೊಂದಿರಬೇಕು.

ಅರ್ಜಿ ಸಲ್ಲಿಕೆ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ ಅರ್ಜಿ ಸಲ್ಲಿಸಬೇಕಿದ್ದು, ವೆಬ್‌ಸೈಟ್‌ www.karnatakapost.gov.in ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು.
– ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಅಟೆಸ್ಟ್‌ ಮಾಡಿಸಿ ಅರ್ಜಿಯೊಂದಿಗೆ ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಯಾವುದೇ ಮೂಲ ದಾಖಲೆಗಳನ್ನು ಅಳವಡಿಸುವ ಅಗತ್ಯವಿಲ್ಲ.

ಅರ್ಜಿ ಸಲ್ಲಿಸಬೇಕಾದ ವಿಳಾಸ :
The Assistant Director (R & E) O/o Chief Postmaster General, Karnataka Circle, Bengaluru-560001.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top