fbpx
ಸಮಾಚಾರ

ಕತ್ತಿ ತಂದಿಟ್ಟ ಸಂಕಷ್ಟ: ದುನಿಯಾ ವಿಜಿಗೆ ಹೊಸ ಸಂಕಟ!

ನಟ ದುನಿಯಾ ವಿಜಯ್ ಅವರಿಗೆ ಸಂಕಷ್ಟಗಳ ಸಂಕಷ್ಟ ಎದುರಾಗುತ್ತಲೇ ಇವೆ. ಈ ಬಾರಿ ದುನಿಯಾ ವಿಜಯ್ ಅವರು ತಮ್ಮ ಜನ್ಮದಿನ ಸಂಭ್ರಮಾಚರಣೆಯಿಂದಲೇ ಸಂಕಷ್ಟವನ್ನು ಬರಮಾಡಿಕೊಂಡಿದ್ದಾರೆ. ದುನಿಯಾ ವಿಜಿ ಬರ್ತ್ ಡೇ ಸೆಲಬ್ರೇಷನ್ ವೇಳೆ ಕೇಕ್ ಕಟ್ ಮಾಡಲು ತಲ್ವಾರ್ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಎಫ್ ಐಆರ್ ದಾಖಲಾಗಿದೆ.

ಇದೇ ತಿಂಗಳ 20ರಂದು ನಟ ದುನಿಯಾ ವಿಜಯ್ ಅವರ ಜನ್ಮದಿನ. ಆ ದಿನ ಅಭಿಮಾನಿಗಳು ನಟನ ಮುಂದೆ ಜಮಾಯಿಸಿದ್ದರು. ಈ ಸಂಭ್ರಮದ ವೇಳೆ ತಡರಾತ್ರಿವರೆಗೂ ಲೌಡ್ ಸ್ಪೀಕರ್ ಉಪಯೋಗಿಸಿ ಅಕ್ಕಪಕ್ಕದವರಿಗೆ ತೊಂದರೆ ನೀಡಿದ್ದಾರೆ. ಹಾಗೂ ತಲ್ವಾರ್​ನಿಂದ ಕೇಕ್​ ಕತ್ತರಿಸಿದ್ದಾರೆ ಮತ್ತು ರಸ್ತೆಯಲ್ಲಿ ಪೆಂಡಾಲ್​ ಹಾಕಿಕೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದಾರೆ ಎಂಬ ಆರೋಪಗಳ ಮೇಲೆ ದುನಿಯಾ ವಿಜಯ್ ಅವರ ಮೇಲೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡಿದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 283 ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ.

ಈಗಾಗಲೇ ವಿಜಯ್ ಗಿರಿನಗರ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಪೊಲೀಸರ ಮುಂದೆ ತಪ್ಪೊಪ್ಪಿಗೆ ನೀಡಿದ್ದು ತಲ್ವಾರ್ ನನ್ನದಲ್ಲ, ಅಭಿಮಾನಿಗಳು ಉಡುಗೊರೆ ನೀಡಿದ್ದರು. ಆತುರದಲ್ಲಿ ಅದರಲ್ಲೇ ಕೇಕ್ ಕಟ್ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಇದೀಗ ಎಫ್​ಐಆರ್ ದಾಖಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top