fbpx
ಸಮಾಚಾರ

‘ನಿಮ್ಮ ತಲೆ ಮೇಲಿರುವ ಕೂದಲಿಗಿಂತ ಹೆಚ್ಚು ಹಣ ನನ್ನ ಬಳಿಯಿದೆ” ಸೆಹ್ವಾಗ್ ಹೇಳಿಕೆಗೆ ಪಾಕ್ ಮಾಜಿ ವೇಗಿ ಶೊಯೆಬ್ ಅಖ್ತರ್ ಪ್ರತಿಕ್ರಿಯೆ!

ಹಣ ಗಳಿಸುವ ಉದ್ದೇಶದಿಂದ ಭಾರತ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್ ಗುಣಗಾನ ಮಾಡುತ್ತಿದ್ದಾರೆಂದು ಕಿಚಾಯಿಸಿದ್ದ ಟೀಮ್ ಇಂಡಿಯಾ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಅವರಿಗೆ ಮಾಜಿ ವೇಗಿ ಬೌನ್ಸರ್‌ ಎಸೆದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವೀಡಿಯೋದಲ್ಲಿ ಮಾತನಾಡಿರುವ ಅಖ್ತರ್‌,” ವಿರೇಂದ್ರ ಸೆಹ್ವಾಗ್ ತಲೆಯಲ್ಲಿರುವ ಕೂದಲಿಗಿಂತ ನನ್ನ ಬಳಿ ಹೆಚ್ಚು ಹಣವಿದೆ,” ಎಂದು ತಿರುಗೇಟು ನೀಡಿದ್ದಾರೆ.

“ಯೌಟ್ಯೂಬ್ ಮೂಲಕ ಹಣ ಗಳಿಸುವ ಉದ್ದೇಶ ನನಗಿಲ್ಲ. ನಿಸ್ಸಂಶಯವಾಗಿಯೂ ಭಾರತ ಉತ್ತಮವಾಗಿ ಆಡುತ್ತಿದೆ ಹಾಗಾಗಿ ಹೊಗಳಿದ್ದೇನೆ. ನನಗೀಗ ಈ ವಿಷಯ ಹೇಳಿ, ಹಿಂದೂಸ್ತಾನ್ ವಿಶ್ವದ ನಂ.1 ತಂಡವಲ್ಲವೆ? ವಿರಾಟ್ ಕೊಹ್ಲಿ ನಂ.1 ಬ್ಯಾಟ್ಸ್‌ಮನ್ ಅಲ್ಲವೇ? ಆಸ್ಟ್ರೇಲಿಯಾ ವಿರುದ್ದ ಕಳಪೆ ಕ್ರಿಕೆಟ್ ಆಡಿ ಗೆದ್ದಿದೆಯೇ? ಇದನ್ನು ಕೂಡಾ ನೋಡಿ. ಭಾರತ ಕೆಟ್ಟದಾಗಿ ಆಡಿದಾಗ ನಾನು ಟೀಕಿಸಿದ್ದೇನೆ.” ಎಂದು ಅಕ್ತರ್ ಹೇಳಿದ್ದಾರೆ

ನಾನು ಪಾಕಿಸ್ತಾನಕ್ಕಾಗಿ 15 ವರ್ಷಗಳನ್ನು ಆಡಿದ್ದೇನೆ. ಯೂಟ್ಯೂಬ್‌ನಿಂದಾಗಿ ಫೇಮಸ್ ಆಗಿಲ್ಲ. ಪಾಕಿಸ್ತಾನ ಪರ ಆಡಿದ್ದಕ್ಕಾಗಿ ಜನಪ್ರಿಯವಾಗಿದ್ದೇನೆ. ಈ ಕಾರಣಕ್ಕಾಗಿ ವಿಶ್ವದ ಅತಿ ವೇಗದ ಬೌಲರ್ ಶೋಯಬ್ ಅಖ್ತರ್ ಆಗಿದ್ದೇನೆ. ನನಗೆ ಶೋಯಬ್ ಅಖ್ತರ್ ಆಗಲು 15 ವರ್ಷಗಳಾಗಿವೆ. ಹೌದು, ಇದು ಕೂಡಾ ನಿಜ. ನನಗೆ ಜಗತ್ತಿನೆಲ್ಲೆಡೆ ಅಭಿಮಾನಿಗಳು ಇದ್ದಾರೆ, ಭಾರತದಲ್ಲೂ ನನ್ನನ್ನು ಜನರು ತುಂಬಾನೇ ಇಷ್ಟಪಡುತ್ತಾರೆ. ಪಾಕಿಸ್ತಾನ ಬಳಿಕ ಅತಿ ಹೆಚ್ಚು ಅಭಿಮಾನಿಗಳುಈ ಭಾರತದಲ್ಲಿ ಇದ್ದಾರೆ.”

ಶೋಯಬ್ ಅಖ್ತರ್ ದುಡ್ಡಿಗಾಗಿ ಭಾರತ ತಂಡವನ್ನು ಹೊಗಳುತ್ತಾರೆ ಎಂದು ಸೆಹ್ವಾಗ್ ಹೇಳಿದ್ದರು. ನೋಡಿ ಇವೆಲ್ಲವೂ ನಿಮ್ಮ ಕೈಯಲಿಲ್ಲ. ಅಲ್ಲಾಹುವಿನ ಕೈಯಲ್ಲಿರುತ್ತದೆ. ನಿಮ್ಮ ತಲೆಯಲ್ಲಿ ಕೂದಲು ಇರುವುದಕ್ಕಿಂತಲೂ ಹೆಚ್ಚು ದುಡ್ಡು ನನ್ನ ಬಳಿಯಿದೆ. ನಾನಿದನ್ನು ತಮಾಷೆಯಾಗಿ ಹೇಳುತ್ತಿದ್ದೇನೆ.. ವೀರು ಇದು ತಮಾಷೆಯಾಗಿದ್ದು, ತಮಾಷೆಯಾಗಿ ತೆಗೆದುಕೊಳ್ಳಿ. ನಿನಗೆ ನಾನು ಈ ಉತ್ತರವನ್ನು ನೀಡಬೇಕಿತ್ತು” ಎಂದು ಅಕ್ತರ್ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top