fbpx
ಸಮಾಚಾರ

ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ ನಿಖಿಲ್: ಕಾಂಗ್ರೆಸ್ ಶಾಸಕರ ಸೋದರನ ಮೊಮ್ಮಗಳೊಂದಿಗೆ ಯುವರಾಜನ ಕಲ್ಯಾಣ

ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರ ವರ್ಷಗಳಿಂದಲೇ ಸದ್ದು ಮಾಡುತ್ತಿದೆ. ಸ್ಯಾಂಡಲ್‌ವುಡ್ ನಟಿಯೊಂದಿಗೆ ನಿಖಿಲ್ ಮದುವೆಯಾಗುತ್ತಿದ್ದಾರೆ ಎಂಬ ವಿಚಾರ ವಾರದ ಹಿಂದೆಯಷ್ಟೇ ದೊಡ್ಡಮಟ್ಟದಲ್ಲಿ ಚರ್ಚೆಯಾಗಿತ್ತು. ಈಗ ನಿಖಿಲ್ ವಧುವಿನ ಮನೆಗೆ ಭೇಟಿನೀಡಿ ಸುದ್ದಿಯಾಗಿದ್ದಾರೆ. ಯಾರು ನಿಖಿಲ್ ಮದುವೆಯಾಗುವ ಹುಡುಗಿ? ಅವರು ಏನು ಮಾಡುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ

 

 

ಕಾಂಗ್ರೆಸ್ ಶಾಸಕರ ಅಣ್ಣನ ಮೊಮ್ಮಗಳ ಜೊತೆ ನಿಖಿಲ್ ಕುಮಾರಸ್ವಾಮಿ ಮದುವೆಯಾಗಲಿದ್ದಾರೆ. ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರನ್ನು ನಿಖಿಲ್ ವರಿಸಲಿದ್ದಾರೆ. ಹುಡುಗಿ ರೇವತಿ ಎಂಸಿಎ ಪದವೀಧರೆಯಾಗಿದ್ದಾರೆ. ಈ ಜೋಡಿಯ ಕಲ್ಯಾಣ ಮೇ 17 ಮತ್ತು 18 ರಂದು ನಡೆಯಲಿದೆ.

ನೆನ್ನೆ ಬೆಂಗಳೂರಿನ ಮಲ್ಲತಳ್ಳಿಯಲ್ಲಿರುವ ವಧುವಿನ ಮನೆಗೆ ದೇವೇಗೌಡರ ಕುಟುಂಬದವರು ಭೇಟಿ ನೀಡಿ ಹುಡುಗಿ ನೋಡುವ ಶಾಸ್ತ್ರವನ್ನು ಮುಗಿಸಿದ್ದಾರೆ. ದೇವೇಗೌಡರು, ಪತ್ನಿ ಚೆನ್ನಮ್ಮ, ಕುಮಾರಸ್ವಾಮಿ, ಅನಿತಾಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ಪುತ್ರಿಯರಾದ ಅನುಸೂಯ, ಶೈಲಜಾ ವಧುವಿನ ಮನೆಗೆ ಭೇಟಿ ನೀಡಿ ಮದುವೆ ಮಾತುಕತೆ ಮುಗಿಸಿದ್ದಾರೆ.

ಇನ್ನು, ನಿಖಿಲ್​ಗಾಗಿ ನೋಡಿರುವ ಎಂಸಿಎ ಪದವೀಧರೆ ರೇವತಿ ಅಂತಾ ತಿಳಿದು ಬಂದಿದೆ. ಜೊತೆಗೆ, ಅವರು ಇಂಟಿರೀಯರ್​ ಡಿಸೈನರ್​ ಕೂಡ ಆಗಿದ್ದಾರಂತೆ. ಇನ್ನು ನಗರದ ಜ್ಞಾನಭಾರತಿ ಸಮೀಪ ಲೇಔಟ್ ಕೃಷ್ಣಪ್ಪ ಅವರ ಕುಟುಂಬ ವಾಸವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top