fbpx
ಸಮಾಚಾರ

ಮೊದಲ ಬಾರಿಗೆ ಮಗನ ಫೋಟೋ ಮತ್ತು ಹೆಸರು ರಿವೀಲ್ ಮಾಡಿದ ‘ಮಜಾ ಟಾಕೀಸ್’ ಖ್ಯಾತಿಯ ನಟಿ ಶ್ವೇತ ಚಂಗಪ್ಪ!

ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಕೆಲ ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಇಲ್ಲಿಯವರೆಗೂ ಆ ಮಗುವಿನ ಫೋಟೋ ಮಾತ್ರ ರಿವೀಲ್‌ ಮಾಡಿರಲಿಲ್ಲ. ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಇದೆ ಮೊದಲ ಬಾರಿಗೆ ತಮ್ಮ ಮಗುವಿನ ಫೋಟೋ ಜೊತೆಗೆ ಹೆಸರನ್ನೂ ರಿವೀಲ್‌ ಮಾಡಿದ್ದಾರೆ.

 

 

View this post on Instagram

 

Dear all. Same day, 26th January, one and half decade ago, I faced the camera for the first time and got introduced to u all😍, on this memorable day i want to introduce my Son Shine to u all🤗. . “Our little Heart, who has brought infinite Happiness to our Lives”😍. Here he issssssss😃 our Small little kodava warrior. “JIYAAN AIYAPPA” ❤️ @jiyaan_aiyappa saying a bigggg hello to u Alllllll😃 . He needs all your blessings and love 🙏🙏… . @kiranappachu Here is our baby’s first pic to the world❤️🤗. . . Photography:- @swararanephotography thank u for clicking this traditional attire pic, exactly the way we wanted our son to look like 😊. . #sonshine #photoshoot #motherhood #parenthood #firstpic #godsgift #blessed #lovemyson #lovemyhubby #lovemylife #loveuzindagi😍👽

A post shared by Swetha Changappa (@swethachangappa) on

 

ಮಗನಿಗೆ ಕೊಡಗಿನ ಉಡುಪನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಅದರಲ್ಲಿ ಒಂದು ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ತಮ್ಮ ಮಗನ ಹೆಸರನ್ನು ತಿಳಿಸಿದ್ದಾರೆ. ಜೊತೆಗೆ ದಿನಾಂಕ 26ರಂದೇ ಫೋಟೋ ರಿವೀಲ್ ಮಾಡಿದ್ದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ.

‘Dear all, ಇದೇ ದಿನ ಜನವರಿ 26ರಂದು 15 ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ಹಾಗೂ ನಿಮ್ಮೆಲ್ಲರಿಗೂ ಪರಿಚಯವಾಗಿದ್ದು. ಈ ವಿಶೇಷ ದಿನವೇ ನಾನು ನನ್ನ ಮಗನನ್ನು ಪರಿಚಯಿಸುತ್ತಿರುವೆ. ನಮ್ಮ ಜೀವನದಲ್ಲಿ ಕಲ್ಪನೆಗೂ ಮೀರಿದ ಸಂತೋಷ ತಂದು ಕೊಟ್ಟ ಪುಟ್ಟ ಕಂದಮ್ಮ kodava warrior ‘ಜಿಯಾನ್‌ ಅಯ್ಯಪ್ಪ’ ನಿಮ್ಮೆಲ್ಲರಿಗೂ ಹಾಯ್‌ ಹೇಳುತ್ತಿದ್ದಾನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಇವನ ಮೇಲೂ ಇರಲಿ…’ ಎಂದು ಬರೆದುಕೊಂಡಿದ್ದಾರೆ.

ಈ ಜಗತ್ತಿಗೆ ನಮ್ಮ ಮಗುವಿನ ಮೊದಲ ಫೋಟೋ ಇದಾಗಿದೆ. ನನ್ನ ಮಗನಿಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಬೇಕು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮಗನ ಫೋಟೋ ಕ್ಲಿಕ್ಕಿಸಿದ್ದಕ್ಕೆ ಫೋಟ್ರೋಗ್ರಾಫರ್ ಗೆ ಧನ್ಯವಾದ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top