fbpx
ಸಮಾಚಾರ

“ಅವಲಕ್ಕಿ ತಿನ್ನುವವರು ಬಾಂಗ್ಲಾದೇಶಿಯರು” ಬಿಜೆಪಿ ನಾಯಕನ ಹೇಳಿಕೆಗೆ ತರಾಟೆಗೆ ತೆಗೆದುಕೊಂಡ ನೆಟ್ಟಿಗರು!

ಅವಲಕ್ಕಿ ತಿನ್ನುವ ಕೆಲಸಗಾರರನ್ನು ಬಾಂಗ್ಲಾದೇಶಿ ರಾಷ್ಟ್ರೀಯರು ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ ವಿಜಯವರ್ಗಿಯಾ ಲೇವಡಿಗೆ ಒಳಗಾಗಿದ್ದಾರೆ. ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಮಾತನಾಡುವ ವೇಳೆ ಬಿಜೆಪಿ ಮುಖಂಡ ಕೈಲಾಶ್ ವಿಜಯ್ ವರ್ಗಿಯ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

“ಮಧ್ಯಪ್ರದೇಶದ ಇಂದೋರ್‌ನಲ್ಲಿ ನಮ್ಮ ಮನೆಗೆ ಬಂದಿದ್ದ ಕಟ್ಟಡ ಕಾರ್ಮಿಕರು ಪೋಹಾ (ಅವಲಕ್ಕಿ) ತಿನ್ನುತ್ತಿದ್ದರು. ಅವಲಕ್ಕಿ ಮಾತ್ರ ತಿನ್ನುತ್ತಿದ್ದ ಅವರು ಬಾಂಗ್ಲಾದೇಶಿಗಳಾಗಿರಬಹುದೆಂದು ಶಂಕಿಸಿದೆ. ನಾನು ಶಂಕೆ ವ್ಯಕ್ತಪಡಿಸಿದ ಎರಡು ದಿನಗಳ ನಂತರ ಅವರು ನಮ್ಮ ಮನೆಗೆ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದರು. ನಾನು ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ, ಆದರೆ ಜನರನ್ನು ಎಚ್ಚರಿಸಲು ಈ ಘಟನೆಯನ್ನು ಉಲ್ಲೇಖಿಸಿದ್ದೇನೆ,” ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಬಿಜೆಪಿ ನಾಯಕನ ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದು, ಹಾಗಾದರೆ ಪಿಜ್ಜಾ ತಿನ್ನುವವರು ಅಮೆರಿಕನ್ನರೇ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಪೋಹಾ ತಿನ್ನುವವರೆಲ್ಲ ಹಾಗಾದರೆ ಬಾಂಗ್ಲಾದೇಶಿಯರೇ ಎಂದು ವಿಜಯ್ ವರ್ಗಿಯಾ ಅವರನ್ನು ಟೀಕಿಸಿದ್ದಾರೆ. ಇನ್ನೊಂದೆಡೆ ತಾವು ಪೋಹಾ ತಿನ್ನುವ ಫೋಟೋಗಳನ್ನು ಅಪ್ಲೋಡ್‌ ಮಾಡಿಕೊಂಡ ಅನೇಕರು ತಾವು ‘ಬಾಂಗ್ಲಾದೇಶಿ’ ಯಾಗುವ ಅರ್ಹತೆ ಇದೆಯೇ ಎಂದು ಟ್ರೋಲ್‌ ಮಾಡಿದ್ದಾರೆ.

ಈ ಕುರಿತಾದ ಕೆಲವು ಟ್ವೀಟ್‌ಗಳು ಇಲ್ಲಿವೆ

 

 

 

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top