fbpx
ಸಮಾಚಾರ

ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಮೇಲೆ ಕಿರುಕುಳ ಆರೋಪ: ಮಹಿಳೆಯಿಂದ ದೂರು ದಾಖಲು!

ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಮುಂಬೈಯ 33 ವರ್ಷದ ಮಹಿಳೆ ಗಣೇಶ್ ಆಚಾರ್ಯ ಅವರಿಂದ ಬಾಲಿವುಡ್ ನಲ್ಲಿ ನನಗೆ ಕೆಲಸ ಮಾಡಲು ಅವಕಾಶ ಕೈ ತಪ್ಪುತ್ತಿದ್ದು ತನಗೆ ಅವಕಾಶ ಸಿಗಬೇಕಾದರೆ ಹಣ ನೀಡುವಂತೆ ಮತ್ತು ವಯಸ್ಕರ ವಿಡಿಯೊಗಳನ್ನು ನೋಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಗಣೇಶ್ ಆಚಾರ್ಯ ಅವರು ಭಾರತೀಯ ಸಿನಿಮಾ ಮತ್ತು ದೂರದರ್ಶನ ನೃತ್ಯ ನಿರ್ದೇಶಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಹೀಗಾಗಿ ಅವರ ಪ್ರಭಾವ ಸಾಕಷ್ಟು ಇರುವುದರಿಂದ ನನಗೆ ಕೆಲಸ ಮಾಡಲು ಅವಕಾಶ ಸಿಗುತ್ತಿಲ್ಲ, ಗಣೇಶ್ ಆಚಾರ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.

ದೂರು ಸಲ್ಲಿಸಿದ ಮಹಿಳೆ ಸಹಾಯಕ ನೃತ್ಯ ನಿರ್ದೇಶಕಿಯಾಗಿದ್ದು ಗಣೇಶ್ ಆಚಾರ್ಯ ತಮ್ಮ ಮೇಲೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಸದಸ್ಯತ್ವವನ್ನು ರದ್ದುಪಡಿಸಲು ನೋಡುತ್ತಿದ್ದು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top