fbpx
ಸಮಾಚಾರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ಖ್ಯಾತಿಯ ನಟ

ಕೆಜಿಎಫ್ ಸಿನಿಮಾ ಖ್ಯಾತಿಯ ನಟ ತಾರಕ್‌ ಪೊನ್ನಪ್ಪ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೂಲತಃ ಕೊಡಗಿನವರಾದ ತಾರಕ್‌ ಗುರು-ಹಿರಿಯರ ಸಮ್ಮುಖದಲ್ಲಿ ಕೊಡಗು ಸಾಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ನವ ಜೋಡಿಗಳು ಕೆಂಪು-ಬಿಳಿ ಡಿಸೈನರ್‌ ವಸ್ತ್ರದಲ್ಲಿ ಕಂಗೊಳಿಸುತ್ತಿದ್ದಾರೆ.

ತಾರಕ್ ಅವರು ವಿವಾಹವಾಗಿರುವ ರಾಧಿಕಾ ಯಾರು? ಅವರ ಹಿನ್ನಲೆ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಇನ್ನು ಕೊಡಗಿನ ಸಂಪ್ರದಾಯದಂತೆ ಇವರಿಬ್ಬರೂ ವಿವಾಹವಾಗಿದ್ದಾರೆ.

ತಾರಕ್ ಪೊನ್ನಪ್ಪ ‘ಕೆಜಿಎಫ್‌’ ಚಾಪ್ಟರ್ 1ರಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾದಲ್ಲೂ ಅವರು ಕಾಣಿಸಿಕೊಂಡಿದ್ದರು. ತಾರಕ್ ಒಳ್ಳೆಯ ಗಾಯಕರೂ ಕೂಡ ಹೌದು. ಅಷ್ಟೇ ಅಲ್ಲದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ’ ಸೀರಿಯಲ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top